Sunday, June 7, 2026
Homeತಾಜಾ ಸುದ್ದಿಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಪೊಲೀಸರ ವಶ

ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಪೊಲೀಸರ ವಶ

- Advertisement -
- Advertisement -

ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಅವರನ್ನು ಪೊಲೀಸರು ಬೆಳಗಾವಿ ರಾಮದೇವ ಹೋಟೆಲ್ ಬಳಿ ವಶಕ್ಕೆ ಪಡೆದಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣದ ವೇಳೆ ನವ್ಯಶ್ರೀ ಪ್ರತಿಭಟನೆಗೆ ಉದ್ದೇಶಿಸಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಎದುರು ಪ್ರತಿಭಟನೆ ಮಾಡಬೇಕೆಂದಿದ್ದರು.

ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಜಕುಮಾರ ಟಾಕಳೆ ಬಂಧನಕ್ಕೆ ಆಗ್ರಹಿಸಿ ಸಚಿವ ಗೋವಿಂದ ಕಾರಜೋಳ ಎದುರೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಎಪಿಎಂಸಿ ಠಾಣೆ ಪೊಲೀಸರಿಂದ ನವ್ಯಶ್ರೀ ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ನವ್ಯಶ್ರೀಯನ್ನು ಬೆಳಗಾವಿ ಮಹಿಳಾ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!