Wednesday, May 15, 2024
Homeತಾಜಾ ಸುದ್ದಿಮಂಗಳೂರು: ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸುನಿಲ್‌ ಕುಮಾರ್:‌ ಅಭಿವೃದ್ಧಿ ಯೋಜನೆಗಳ ಕುರಿತು ಸಚಿವರ...

ಮಂಗಳೂರು: ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸುನಿಲ್‌ ಕುಮಾರ್:‌ ಅಭಿವೃದ್ಧಿ ಯೋಜನೆಗಳ ಕುರಿತು ಸಚಿವರ ಭರವಸೆ

spot_img
- Advertisement -
- Advertisement -

ಮಂಗಳೂರು: 76ನೇ ಸ್ವಾತಂತ್ರೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ನಗರದ ನೆಹರು ಮೈದಾನದಲ್ಲಿ ಸಚಿವ ಸುನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದ್ರು.. ಇದೇ ವೇಳೆ ಕನಸಿನ ಮಂಗಳೂರು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ್ರು.

ಮಂಗಳೂರು ತೀವ್ರ ಗತಿಯಲ್ಲಿ ಬೆಳೆಯುತ್ತಿದ್ದು, ಹತ್ತು ವರ್ಷಗಳ ನಂತರ ಮಂಗಳೂರಿನ ಜನತೆಗೆ ಒಂದು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಕಾಗುತ್ತದೆ. ಸದ್ಯಕ್ಕೆ 750 ಮೆಗಾವ್ಯಾಟ್‌ ಖರ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೊಸತಾಗಿ 300 ಕೆವಿ ಸಬ್ ಸ್ಟೇಶನ್ ಸ್ಥಾಪಿಸಲಾಗುವುದು ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.

ಇದಲ್ಲದೆ, ಮಂಗಳೂರು ನಗರದ ವ್ಯಾಪ್ತಿ ಬೆಳೆಯುತ್ತಿರುವುದರಿಂದ ತ್ಯಾಜ್ಯ ವಿಲೇವಾರಿ ಸವಾಲನ್ನು ಎದುರಿಸಲು ಜಿಲ್ಲೆಯ ನಾಲ್ಕು ಕಡೆ ತ್ಯಾಜ್ಯ ವಿಲೇ ಘಟಕ ಸ್ಥಾಪಿಸಲಾಗುವುದು. ಮಂಗಳೂರಿನ ತೆಂಕ ಎಡಪದವು, ಬಂಟ್ವಾಳ, ಉಜಿರೆ ಮತ್ತು ಪುತ್ತೂರಿನಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಆಗಲಿದೆ ಎಂದರು.

ಇನ್ನು ಈ ಬಾರಿ ಭೂಕುಸಿತ, ಅತಿ ವೃಷ್ಟಿಯಿಂದಾಗಿ ಬಹಳಷ್ಟು ಹಾನಿಯಾಗಿದೆ. ಪ್ರವಾಹ ಎದುರಿಸುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ರಮ ಪಟ್ಟಿದ್ದಾರೆ. ಭೂಕುಸಿತಕ್ಕೆ ಏನು ಕಾರಣ ಅನ್ನೋದ್ರ ಬಗ್ಗೆ ತಜ್ಞರ ವರದಿ ಪಡೆಯುತ್ತೇವೆ. ಇದೇ ವೇಳೆ, ಭೂಕುಸಿತ ಮತ್ತು ಮಳೆಹಾನಿಗೆ 110 ಕೋಟಿ ಪರಿಹಾರದ ಪ್ಯಾಕೇಜ್ ಕೇಳಿ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಮಂಗಳೂರು ಮತ್ತು ಉಡುಪಿಗೆ ಟೆಂಪಲ್ ಟೂರಿಸಂ ಯೋಜನೆಯಿದ್ದು, ದೇವಸ್ಥಾನಗಳ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

- Advertisement -
spot_img

Latest News

error: Content is protected !!