Friday, June 5, 2026
Homeತಾಜಾ ಸುದ್ದಿಮುಕೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಬೆದರಿಕೆ: ಮೂರು ಗಂಟೆಯಲ್ಲಿ ಕೊಲೆ ಮಾಡುವುದಾಗಿ ಫೋನ್ ಕರೆ: ಒಬ್ಬನ...

ಮುಕೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಬೆದರಿಕೆ: ಮೂರು ಗಂಟೆಯಲ್ಲಿ ಕೊಲೆ ಮಾಡುವುದಾಗಿ ಫೋನ್ ಕರೆ: ಒಬ್ಬನ ಬಂಧನ

- Advertisement -
- Advertisement -

ಉದ್ಯಮಿ ಮುಖೇಶ್ ಅಂಬಾನಿ ಅವರ ಕುಟುಂಬಕ್ಕೆ ಇಂದು(ಸೋಮವಾರ) ಬೆದರಿಕೆ ಕರೆಗಳು ಬಂದಿವೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ  ಡಿಸ್ಪ್ಲೇ ಸಂಖ್ಯೆಗೆ ಬೆದರಿಕೆ ಕರೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಇಂದು ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆದರಿಕೆ ಕರೆಗಳಿಗೆ ನಂಟು ಹೊಂದಿರುವ ಅನುಮಾನದಲ್ಲಿ ಮುಂಬಯಿಯ ಪಶ್ಚಿಮ ಉಪನಗರದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬಂಧಿತನನ್ನು ಅಫ್ಜಲ್ ಎಂದು ಗುರುತಿಸಲಾಗಿದ್ದು, ಕರೆ ಬಂದಿದ್ದ ಫೋನ್ ಸಂಖ್ಯೆಯನ್ನು ಪತ್ತೆ ಮಾಡಿ, ಅದರ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!