- Advertisement -
- Advertisement -
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಎಐಸಿಸಿ ಇಂದು ಸಂಜೆ (ಸೋಮವಾರ) ತನ್ನ ಅಧಿಕೃತ 17 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ.
ಭಾರೀ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥ ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್ ಹೈಕಮಾಂಡ್ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಸೋಮವಾರ ಸಂಜೆ ಪಟ್ಟಿ ಬಿಡುಗಡೆಗೊಳಿಸಿದೆ.
ಈ ಕ್ಷೇತ್ರದಲ್ಲಿ ಡಾ.ರಾಜೇಂದ್ರ ಕುಮಾರ್ ಅವರ ಹೆಸರೂ ಕೇಳಿ ಬಂದಿತ್ತು. ಆದರೆ ಎರಡು ದಿನಗಳ ಹಿಂದೆ ಚುನಾವಣೆಗೇ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಮತ್ತೊಂದು ಅಚ್ಚರಿ ಮೂಡಿಸಿದ್ದರು.
ಅಭ್ಯರ್ಥಿಗಳ ಪಟ್ಟಿ ಇಂತಿದೆ:
- ಕಲಬುರಗಿ: ಶಿವಾನಂದ ಪಾಟೀಲ್ ಮರ್ತುರು
- ಬೆಳಗಾವಿ: ಚೆನ್ನರಾಜ್ ಹಟ್ಟಿಹೊಳಿ
- ಉತ್ತರಕನ್ನಡ -ಭೀಮಣ್ಣ ನಾಯ್ಕ್
- ಧಾರವಾಡ: ಸಲೀಂ ಅಹಮದ್
- ರಾಯಚೂರು: ಶರಣಗೌಡ ಪಾಟೀಲ್
- ಚಿತ್ರದುರ್ಗ -ಬಿ.ಸೋಮಶೇಖರ್
- ಶಿವಮೊಗ್ಗ: ಆರ್. ಪ್ರಸನ್ನ ಕುಮಾರ್
- ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡ
- ಹಾಸನ: ಎಂ. ಶಂಕರ್
- ತುಮಕೂರು: ಆರ್. ರಾಜೇಂದ್ರ
- ಮಂಡ್ಯ: ದಿನೇಶ್ ಗೂಳಿಗೌಡ
- ಕೊಡಗು: ಮಂಥರ್ ಗೌಡ
- ವಿಜಯಪುರ-ಬಾಗಲಕೋಟೆ : ಸುನಿಲ್ ಗೌಡ
- ಮೈಸೂರು-ಚಾಮರಾಜನಗರ : ಡಾ.ಡಿ. ತಿಮ್ಮಯ್ಯ
- ಬಳ್ಳಾರಿ : ಕೆ.ಸಿ.ಕೊಂಡಯ್ಯ
- ಬೆಂಗಳೂರು ಗ್ರಾಮಾಂತರ: ಎಸ್.ರವಿ
- Advertisement -