Monday, June 8, 2026
Homeಕರಾವಳಿರಾಷ್ಟ್ರಗೀತೆ ತಪ್ಪಾಗಿ ಹಾಡಿ ವೈರಲ್ ಆದ ಬಂಟ್ವಾಳ ಪುರಸಭೆ ಕಾಂಗ್ರೆಸ್ ಸದಸ್ಯ : ಇದೀಗ ನನಗೆ...

ರಾಷ್ಟ್ರಗೀತೆ ತಪ್ಪಾಗಿ ಹಾಡಿ ವೈರಲ್ ಆದ ಬಂಟ್ವಾಳ ಪುರಸಭೆ ಕಾಂಗ್ರೆಸ್ ಸದಸ್ಯ : ಇದೀಗ ನನಗೆ ಸರಿಯಾಗಿ ರಾಷ್ಟ್ರಗೀತೆ ಬರುತ್ತೆ ಅಂತಾ ವಿಡಿಯೋ ಹರಿಬಿಟ್ಟ ಮುಖಂಡ

- Advertisement -
- Advertisement -

ಬಂಟ್ವಾಳ : ಮೊನ್ನೆ ಸ್ವಾತಂತ್ರ್ಯದಿನಾಚರಣೆಯ ದಿನ ಬಂಟ್ವಾಳ ಪುರಸಭೆ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೋರೊಟ್ಟೊ ರಾಷ್ಟ್ರಗೀತೆಯನ್ನು ತಪ್ಪು ತಪ್ಪಾಗಿ ಹಾಡಿ ರಾಷ್ಟ್ರಗೀತೆಗೆ ಅವಮಾನ ಎಸಗಿದ್ದರು. ಅಲ್ಲದೇ ಅವರ ರಾಷ್ಟ್ರಗೀತೆ ಕೇಳಿ ಕರಾವಳಿ ಮಂದಿ ಸುಸ್ತಾಗಿ ಹೋಗಿದ್ದರು. ಅಲ್ಲದೇ ವಿಡಿಯೋ ಕೂಡ ವೈರಲ್ ಆಗಿತ್ತು.

ಇದೀಗ ವಾಸು ಪೂಜಾರಿ ಅವರು ವಿಡಿಯೋ ಒಂದನ್ನು ಹರಿ ಬಿಟ್ಟಿದ್ದು ಅದರಲ್ಲಿ ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡಿದ್ದಾರೆ. ಆ ಮೂಲಕ ನನಗೆ ರಾಷ್ಟ್ರಗೀತೆ ಸರಿಯಾಗಿ ಬರುತ್ತೆ ಎಂದು ತೋರಿಸಿದ್ದಾರೆ. ಆದರೆ ಹಾಗಾದ್ರೆ ಆ ದಿನ ಮಾತ್ರ ಯಾಕೆ ಹಾಗೇ ಹಾಡಿದ್ರಿ ಅಂತಾ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಇನ್ನೂ ಕೆಲವರು ಇದು ಪ್ರಾಕ್ಟೀಸ್ ಮಾಡಿದ್ದಾ ಅಂತಾ ಕೇಳುತ್ತಿದ್ದಾರೆ. ಅದೇನೇ ಇರಲಿ ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡಿ ತಮ್ಮಿಂದಾದ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ವಾಸು ಪೂಜಾರಿ ಅವರು ಪ್ರಯತ್ನಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು.

- Advertisement -

Latest News

error: Content is protected !!