Friday, June 5, 2026
Homeರಾಜಕೀಯಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕೃತಗೊಂಡು ಮೂಲೆ ಗುಂಪಾಗಿದೆ: ವೇದವ್ಯಾಸ್ ಕಾಮತ್

ಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕೃತಗೊಂಡು ಮೂಲೆ ಗುಂಪಾಗಿದೆ: ವೇದವ್ಯಾಸ್ ಕಾಮತ್

- Advertisement -
- Advertisement -

ಮಂಗಳೂರು: ಪಂಚ‌ರಾಜ್ಯ ಚುನಾವಣೆಯ ಫಲಿತಾಂಶವು ಬಿಜೆಪಿಯ ಅಭಿವೃದ್ಧಿ, ಸಧೃಡ ನಾಯಕತ್ವಕ್ಕೆ ಸಂದ ಗೆಲುವು. ಪಂಜಾಬ್ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಆಡಳಿತಕ್ಕೇರುವ ಮೂಲಕ ದೇಶದ ಜನರಿಗೆ ಬಿಜೆಪಿಯ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎನ್ನುವುದು ಸಾಬೀತಾಗಿದೆ ಎಂದು ಶಾಸಕ‌ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಮೂಲಕ ಜನಾಶಿರ್ವಾದ ಪಡೆದಿದೆ. ಅವ್ಯಾಹತವಾಗಿ ಅಪಪ್ರಚಾರ ಮಾಡಿದ ಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕೃತಗೊಂಡು ಮೂಲೆ ಗುಂಪಾಗಿದೆ. ಈ ಪಂಚ ರಾಜ್ಯ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ಆಡಳಿತ ವೈಖರಿಯನ್ನು ಮೆಚ್ಚಿ ಮತ ನೀಡಿದ ಪ್ರತಿಯೊಬ್ಬ ಮತದಾರ ಪ್ರಭುವಿಗೂ ಧನ್ಯವಾದಗಳು ಹಾಗೂ ಗೆದ್ದು ಜನರ ಸೇವೆಗೆ ಆಯ್ಕೆಯಾದ ಎಲ್ಲಾ ಶಾಸಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!