Friday, May 3, 2024
Homeಕರಾವಳಿಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಗೌಪ್ಯ ಸಭೆ ಅಂತ್ಯ:ಪಕ್ಷದ ಮೂರು ಬಾಗಿಲನ್ನು ಮುಚ್ಚಿದ್ರಾ ಜಿಲ್ಲಾಧ್ಯಕ್ಷರು..?ಗೌಪ್ಯ ಸಭೆಯಲ್ಲಿ ನಡೆದಿದ್ದೇನು..?

ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಗೌಪ್ಯ ಸಭೆ ಅಂತ್ಯ:ಪಕ್ಷದ ಮೂರು ಬಾಗಿಲನ್ನು ಮುಚ್ಚಿದ್ರಾ ಜಿಲ್ಲಾಧ್ಯಕ್ಷರು..?ಗೌಪ್ಯ ಸಭೆಯಲ್ಲಿ ನಡೆದಿದ್ದೇನು..?

spot_img
- Advertisement -
- Advertisement -

ಬೆಳ್ತಂಗಡಿ : ಹೈಕಮಾಂಡ್ ನಿಂದ ಜಿಲ್ಲಾಧ್ಯಕ್ಷರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಬಳಿಕ ಭಾನುವಾರ (ಇಂದು) ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ  ಬೆಳ್ತಂಗಡಿಯ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಗೊಂದಲವನ್ನು ಬಗೆಹರಿಸುವಲ್ಲಿ ಮೊದಲ ಪ್ರಯತ್ನದಲ್ಲಿಯೇ ಹರೀಶ್ ಕುಮಾರ್ ಯಶಸ್ವಿಯಾಗಿದ್ದು ಅದಲ್ಲದೆ ಕಾಂಗ್ರೆಸ್ ಪಕ್ಷದೊಳಗಿನ ಮೂರು ಬಾಗಿಲನ್ನು ಬಹುತೇಕ ಮುಚ್ಚಿಸಿ ಒಂದೇ ಬಾಗಿಲು ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಡಿ.11 ರಂದು(ಇಂದು) ಸಂಜೆ 3:30  ರಿಂದ 6 ಗಂಟೆಯವರೆಗೆ ಬೆಳ್ತಂಗಡಿ ಅಯ್ಯಪ್ಪ ಗುಡಿ ಬಳಿ ಇರುವ ಮಂಜುನಾಥ ಸಭಾಭವನದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಎಮ್.ಎಲ್.ಸಿ ಹರೀಶ್ ಕುಮಾರ್ ನೇತೃತ್ವದಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಮನೆಯೊಂದು ಮೂರು ಬಾಗಿಲು ಗೊಂದಲವನ್ನು ಬಗೆಹರಿಸಿದ್ದು ಇದಕ್ಕೆ ಪಕ್ಷದ ಮುಖಂಡರು ಸೈ ಎಂದಿದ್ದಾರೆ. ಅದಲ್ಲದೆ ಕೆಲವರು ಸಭೆಯಲ್ಲಿ ಉಲ್ಟಾ ಪಲ್ಟಾ ಮಾತಾನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಹರೀಶ್ ಕುಮಾರ್ ಬಾಯಿ ಮುಚ್ಚಿಸಿ ಕೂರಿಸಿದ್ದಾರೆ ಎನ್ನಲಾಗಿದೆ.

ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡಲು ವಾರ್ನಿಂಗ್: ಸಭೆಯಲ್ಲಿ ಹೈಕಮಾಂಡ್ ಹೇಳುವ ಅಭ್ಯರ್ಥಿಗೆ ನಾವು ಬದ್ಧರಿರಬೇಕು , ಈಗಾಗಲೇ ಕೆ.ವಸಂತ ಬಂಗೇರ , ಗಂಗಾಧರ್ ಗೌಡ , ರಕ್ಷಿತ್ ಶಿವರಾಂ ಕೆಪಿಸಿಸಿಯಲ್ಲಿ ಅರ್ಜಿ ಸಲ್ಲಿಸಿದ್ದು ಹೈಕಮಾಂಡ್ ಯಾರನ್ನು ಅಭ್ಯರ್ಥಿ ಘೋಷಣೆ ಮಾಡುತ್ತಾರೋ ಆ ಅಭ್ಯರ್ಥಿಯ ಜೊತೆ ನಿಂತು ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಬೇಕು ಯಾರು ಕೂಡ ಬಣ ರಾಜಕೀಯ ಮಾಡಬಾರದು ಎಂದು ಪಕ್ಷದ ಪ್ರಮುಖ ಮುಖಂಡರಿಗೆ ಖಡಕ್ ಸೂಚನೆ ನೀಡಿದ್ದಾರೆ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್.

ಸಾಮಾಜಿಕ ಜಾಲತಾಣ ಕಂಟ್ರೋಲ್: ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ , ವಾಟ್ಸಾಪ್ ಮುಂತಾದರಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಬ್ಲಾಕ್, ಅಭ್ಯರ್ಥಿ , ಕೆಲವು ಲೀಡರ್ ಗಳ ಬಗ್ಗೆ ಒಟ್ಟಾರೆಯಾಗಿ ಫೋಸ್ಟ್ ಹಾಕುವುದನ್ನು ನಿಲ್ಲಿಸಬೇಕು. ಅದಲ್ಲದೆ ಕಾಮೆಂಟ್ ಹಾಕ ಬಾರದು ಎಂದು ಸಭೆಯಲ್ಲಿ ತಿಳಿಸಲಾಗಿದೆ.

ಸಭೆಯಲ್ಲಿ ನಡೆದದ್ದು ಏನು?: ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ 250 ಮಂದಿ ಭಾಗಿಯಾಗಿದ್ದು ಈ ಸಭೆಯಲ್ಲಿ ಎ.ಸಿ.ಮ್ಯಾಥ್ಯು, ಕೇಶವ ಬೆಳಾಲು, ಅಂಡಿಂಜೆಯ ಗ್ರಾಮ ಪಂಚಾಯತ್ ಸದಸ್ಯೆ ವಂದನಾ ಭಂಡಾರಿ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದು ಅದಕ್ಕೆ ಹರೀಶ್ ಕುಮಾರ್ ಸರಿಯಾಗಿ ಮಾರ್ಗದರ್ಶನ ನೀಡಿದ್ದಾರೆ. ಅದಲ್ಲದೆ ಈ ಸಭೆಯಲ್ಲಿ ನಾನು ಬೆಂಗಳೂರಿನಲ್ಲಿದ್ದು ಈಗ ಊರಿಗೆ ಬಂದು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಸದಸ್ಯೆಯಾಗಿದ್ದು ಹಾಗಾಗಿ ಯಾರೇ ಎಲ್ಲಿಂದಲ್ಲೂ ಬಂದ್ರೂ ಚುನಾವಣೆಗೆ ನಿಲ್ಲಲ್ಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಸದಸ್ಯೆ ವದಂನಾ ಭಂಡಾರಿ ತಿಳಿಸಿದರು. ಸಭೆಯಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿನ್.ಜಿ.ಗೌಡ ಮತ್ತು ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್ ಯಾವುದೇ ಮಾತು ತೆಗೆಯದೆ ಮೌನವಾಗಿದ್ದರು ಎನ್ನಲಾಗಿದೆ.

ಇನ್ನು ಸಿದ್ದರಾಮಯ್ಯ ಬೆಳ್ತಂಗಡಿಗೆ ಅಗಮಿಸುವ ವೇಳೆ ಚುನಾವಣೆಗೆ ಅರ್ಜಿ ಸಲ್ಲಿಸಿದ ಮೂವರಾದ ವಸಂತ ಬಂಗೇರ , ಗಂಗಾಧರ್ ಗೌಡ , ರಕ್ಷಿತ್ ಶಿವರಾಂ ಅವರನ್ನು ಒಂದೇ ವೇದಿಕೆಯಲ್ಲಿ ಕೂರಿಸಬೇಕೆಂದು ಸಭೆಯಲ್ಲಿದ್ದವರು ಅಭಿಪ್ರಾಯ ತಿಳಿಸಿದ್ದಾರೆ.

ಬೆಳ್ತಂಗಡಿ ಕಾಂಗ್ರೆಸ್ ಪಕ್ಷದವರಿಗೆ ಸೂಚನೆ: ಸಭೆಯ ಕೊನೆಯಲ್ಲಿ ಪಕ್ಷದ ಮುಖಂಡರಿಗೆ ಸರಿಯಾಗಿ ಸೂಚನೆ ಹಾಗೂ ಮಾರ್ಗದರ್ಶನ ನೀಡಿ ಪಕ್ಷದಲ್ಲಿದ್ದ ಗೊಂದಲವನ್ನು ಬಹುತೇಕ ನಿವಾರಿಸಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾದ ಬಲ್ಲ ಮೂಲಗಳು ತಿಳಿಸಿದೆ.

- Advertisement -
spot_img

Latest News

error: Content is protected !!