Thursday, June 4, 2026
Homeಕರಾವಳಿಮಂಗಳೂರುಶಾರ್ಜಾ ಅಂತರಾಷ್ಟ್ರೀಯ ಕ್ರಿಕೆಟ್ ಅಂಗಣದಲ್ಲಿ ಸೂರಾಲಿನ ವಿಠಲ ನಾಯಕರಿಗೆ ಅಭಿನಂದನೆ

ಶಾರ್ಜಾ ಅಂತರಾಷ್ಟ್ರೀಯ ಕ್ರಿಕೆಟ್ ಅಂಗಣದಲ್ಲಿ ಸೂರಾಲಿನ ವಿಠಲ ನಾಯಕರಿಗೆ ಅಭಿನಂದನೆ

- Advertisement -
- Advertisement -

ಕುಂದಾಪುರ ಸಮೀಪದ ಸೂರಾಲಿನ ಪ್ರತಿಭೆ ವಿಠಲ ರಿಶಾನ್ ನಾಯಕ್ ಅವರ ಕ್ರಿಕೆಟ್ ಆಟ ಅರಬ್ ಸಂಯುಕ್ತ ರಾಷ್ಟ್ರದ ದುಬೈ ಹಾಗೂ ಶಾರ್ಜಾದಲ್ಲಿ ಭಾರಿ ಸದ್ದು ಮಾಡುತ್ತಿದೆ.ಮದ್ಯಮ ವೇಗದ ಎಸೆತ ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗನಾಗಿ ಮಿಂಚುತ್ತಿರುವ ವಿಠಲ್ ನಾಯಕ್ ತಂಡದ ಗೆಲುವಿಗೆ ಪ್ರಮುಖ ಆಟಗಾರನಾಗಿ ಹೆಸರು ಮಾಡುತ್ತಿದ್ದಾರೆ.

ಈಗಾಗಲೇ ದುಬೈನ ಪ್ರಸಿದ್ಧ ಕ್ರಿಕೆಟ್ ತಂಡಗಳಾದ ಟೆಕ್ನೋ-ಟೈಟಾನ್ಸ್,ಟೆಕ್ನೋ-ಕ್ರಿಕೆಟರ್ಸ್,ಟೆಕ್ನೋ-ವಾರಿಯರ್ಸ್ ತಂಡಗಳಿಗೆ ನಾಯಕನಾಗಿ ಹಾಗೂ ಅಲ್ಲಿನ ವಿದ್ವಾರ್ಸ್ ಬಾಯ್ಸ್ ಮಂಗಳೂರು ಈ ತಂಡಕ್ಕೆ ಮಾರ್ಗದರ್ಶಕರಾಗಿ ಯಶಸ್ಸು ಫಲಿತಾಂಶದ ಜೊತೆಗೆ ಹಲವಾರು ಟ್ರೋಫಿಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ  ವಿಠಲ ನಾಯಕ್ ಅವರ ಕೊಡುಗೆ ಅಮೂಲ್ಯ.ಕುಂದಾಪುರದ ಸೂರಾಲಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಸ್ವಗ್ರಾಮದಲ್ಲಿ ಶಾಲಾ ಶಿಕ್ಷಣ ಪೂರೈಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಉದ್ಯೋಗಾರ್ಥಿಯಾಗಿ ದುಬೈಗೆ ಆಗಮಿಸಿದ ನಂತರ ಇಲ್ಲಿನ ಕ್ರಿಕೆಟ್ ಆಟ ವಿಠಲ್ ಅವರ ಬದುಕಿಗೆ ಹೊಸ ಆಯಾಮ ನೀಡಿತು.

ಇತ್ತೀಚೆಗೆ ವಿಠಲ್ ಅವರ ಪ್ರತಿಭೆಯನ್ನು ಗಮನಿಸಿದ ದುಬೈನ ಸ್ಥಳೀಯ ಕ್ರಿಕೆಟ್ ಸಂಘ ಸಂಸ್ಥೆಗಳು ಹಾಗೂ ಅಲ್ಲಿನ ಯುನೈಟೆಡ್ ಕಾಪು ಟ್ರೋಫಿಯ ಸಂಘಟಕರಾದ ಶ್ರೀಫೈಜಲ್,ಶ್ರೀಶಫಿ,ಶ್ರೀಆಶಿಕ್ ಬಾಯ್,ಶ್ರೀಆದಿಲ್,ಶ್ರೀಶಕೀರ್ ಬಾಯ್ ನೇತೃತ್ವದಲ್ಲಿ ಶಾರ್ಜಾ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ವಿಠಲ ನಾಯಕರಿಗೆ ಫಲಪುಷ್ಪ ನೀಡಿ ಶಾಲು ಹೊದೆಸಿ ಬೆಲೆಬಾಳುವ ಅಮೂಲ್ಯ ಸ್ಮರಣಿಕೆಯೊಂದಿಗೆ ತುಂಬು ಹೃದಯದ ಅಭಿನಂದನೆಯನ್ನು ಬಹು ವಿಜೃಂಭಣೆಯಿಂದ ಸಲ್ಲಿಸಿತ್ತು. ಈ ಸಮಾರಂಭದಲ್ಲಿ ಇಲ್ಲಿನ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರು ಹಾಗೂ ನೂರಾರು ಕ್ರೀಡಾಭಿಮಾನಿಗಳು ನೆರೆದಿದ್ದರು.ನಮ್ಮ ಊರ ಪ್ರತಿಭೆಗೆ ಶುಭ ಹಾರೈಸೋಣ.

- Advertisement -

Latest News

error: Content is protected !!