Thursday, October 15, 2026
Homeಕರಾವಳಿಮಂಗಳೂರುಗುಂಡ್ಯ; ಚಲಿಸುತ್ತಿದ್ದ ಲಾರಿಯಿಂದ ಜಿಗಿದು ಕಂಡೆಕ್ಟರ್ ಸಾವು

ಗುಂಡ್ಯ; ಚಲಿಸುತ್ತಿದ್ದ ಲಾರಿಯಿಂದ ಜಿಗಿದು ಕಂಡೆಕ್ಟರ್ ಸಾವು

- Advertisement -
- Advertisement -

ಗುಂಡ್ಯ; ಚಲಿಸುತ್ತಿದ್ದ ಲಾರಿಯಿಂದ ಜಿಗಿದು ಕಂಡೆಕ್ಟರ್ ಸಾವನ್ನಪ್ಪಿರುವ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಫೆ.25ರಂದು ಮುಂಜಾನೆ ನಡೆದಿದೆ.

ತಮಿಳುನಾಡು ಚಿನ್ನತೂಬುರ್ ನಾಗಪಟ್ಟಿನಮ್ ನಿವಾಸಿ ಲಕ್ಷ್ಮಣನ್ ಸೆಂಗುತ್ತುವನ್(46) ಮೃತ ನಿರ್ವಾಹಕ.

ತಮಿಳುನಾಡಿನ ಕೃಷ್ಣಗಿರಿಯಿಂದ ಕಲ್ಲಂಗಡಿಯನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದ ಲಾರಿಯು ಗುಂಡ್ಯ ಸಮೀಪದ ಅಡ್ಡಹೊಳೆ ತಲುಪುತಿದ್ದಂತೆ ಏಕಾಏಕಿಯಾಗಿ ನಿರ್ವಾಹಕ ಲಾರಿಯಿಂದ ಜಿಗಿದು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!