Sunday, June 30, 2024
Homeಕರಾವಳಿಮಂಗಳೂರುಮಂಗಳೂರು: ಮಳೆಗೆ ಕುಸಿದ ಬೃಹತ್ ಕಾಂಕ್ರೀಟ್ ತಡೆಗೋಡೆ; ಅಪಾಯದಲ್ಲಿರುವ 2 ಮನೆಗಳು

ಮಂಗಳೂರು: ಮಳೆಗೆ ಕುಸಿದ ಬೃಹತ್ ಕಾಂಕ್ರೀಟ್ ತಡೆಗೋಡೆ; ಅಪಾಯದಲ್ಲಿರುವ 2 ಮನೆಗಳು

spot_img
- Advertisement -
- Advertisement -

ಮಂಗಳೂರು: ಮಳೆಯಿಂದಾಗಿ ಬೃಹತ್ ತಡೆಗೋಡೆ ಕುಸಿದು ಎರಡು ಮನೆಗಳು ಅಪಾಯಕ್ಕೆ ಸಿಲುಕಿರುವ ಘಟನೆ ಮಂಗಳೂರು ತಾಲೂಕಿನ ಮರವೂರು ಸಮೀಪದ ಅಂತೋನಿ ಕಟ್ಟೆ ಎಂಬಲ್ಲಿ ನಡೆದಿದೆ.

ಸೆವರಿನ್ ಪಿಂಟೋ ಎಂಬವರಿಗೆ ಸೇರಿದ ಜಾಗದಲ್ಲಿ ನಿರ್ಮಾಣ ಮಾಡಿದ್ದ ಬೃಹತ್ ಕಾಂಕ್ರೀಟ್ ತಡೆಗೋಡೆ ಕುಸಿದು ಮೋಲಿ ಪಿಂಟೋ ಎಂಬವರ ಸೇರಿದ ಮನೆಯ ಮೇಲೆ ಬಿದ್ದಿದೆ.

ಬೆಳಗ್ಗಿನ ಜಾವ 2 ಗಂಟೆಗೆ ಅವಘಡ ಸಂಭವಿಸಿದ ಸಂದರ್ಭದಲ್ಲಿ ಮನೆಯೊಳಗೆ ನಾಲ್ಕು ಜನರು ಇದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹತ್ತು ಲಕ್ಷ ರೂಪಾಯಿಯಷ್ಟು ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದು, ಘಟನಾ ನಡೆದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಎರಡು ಮನೆಗಳಿಗೂ ಪರಿಹಾರದ ಭರವಸೆ ನೀಡಿದ್ದಾರೆ.

ಕುಸಿದು ಬಿದ್ದಿರುವ ತಡೆಗೋಡೆ ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಅಪಾಯಕ್ಕೆ ಸಿಲುಕಿರುವ ಎರಡು ಮನೆಗಳಲ್ಲಿದ್ದ ಆರು ಜನರನ್ನು ಸ್ಥಳಾಂತರ ಮಾಡಲಾಗಿದೆ.

- Advertisement -
spot_img

Latest News

error: Content is protected !!