Thursday, July 3, 2025
Homeತಾಜಾ ಸುದ್ದಿಕಂಪ್ಲೀಟ್ ಲಾಕ್‌ ಡೌನ್:‌ ಭಾನುವಾರ ವಿವಾಹ ನಡೆಸುವ‌ ಕುರಿತು ಇದ್ದ ಗೊಂದಲಕ್ಕೆ ತೆರೆ

ಕಂಪ್ಲೀಟ್ ಲಾಕ್‌ ಡೌನ್:‌ ಭಾನುವಾರ ವಿವಾಹ ನಡೆಸುವ‌ ಕುರಿತು ಇದ್ದ ಗೊಂದಲಕ್ಕೆ ತೆರೆ

spot_img
- Advertisement -
- Advertisement -

ಬೆಂಗಳೂರು: ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರಿಂದ ಪೂರ್ವ ನಿಗದಿತ ವಿವಾಹಗಳ ಬಗ್ಗೆ ಎದ್ದಿದ್ದ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ.

ಭಾನುವಾರ ವಾಹನ ಸಂಚಾರ ಸಂಪೂರ್ಣ ನಿಷೇಧ ಹೇರಲಾಗಿದ್ದು, ವ್ಯಾಪಾರ-ವಹಿವಾಟಿಗೂ ಅವಕಾಶವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಭಾನುವಾರದಂದು ನಿಗದಿಯಾದ ವಿವಾಹಗಳ ಕತೆ ಏನು ಎಂಬ ಪ್ರಶ್ನೆ ಎದ್ದಿತ್ತು. ಆದರೆ ವಿವಾಹಗಳಿಗೆ ಅವಕಾಶ ನೀಡಲು ಸರ್ಕಾರ, ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

ಐವತ್ತು ಜನರಿಗೆ ಸೀಮಿತಗೊಂಡಂತೆ ವಿವಾಹ ನಡೆಸುವ ಷರತ್ತು ಈಗಾಗಲೇ ಜಾರಿಯಲ್ಲಿದ್ದು, ಭಾನುವಾರ ನಡೆಯುವ ವಿವಾಹಗಳಿಗೂ ಅದು ಅನ್ವಯವಾಗಲಿದೆ.

- Advertisement -
spot_img

Latest News

error: Content is protected !!