Wednesday, June 24, 2026
Homeಉತ್ತರ ಕನ್ನಡನಿನ್ನೆ ಭಟ್ಕಳ ಬಂದ್ ಹಿನ್ನೆಲೆ: ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲು

ನಿನ್ನೆ ಭಟ್ಕಳ ಬಂದ್ ಹಿನ್ನೆಲೆ: ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಕಾರವಾರ: ನಿನ್ನೆ ಭಟ್ಕಳ ಬಂದ್ ಹಿನ್ನಲೆಯಲ್ಲಿ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಪಿಎಫ್ಐ ಸಂಘಟನೆ ಕಾರ್ಯಕರ್ತರು ಮತ್ತು ವಕೀಲರ ಮೇಲೆ ಪ್ರಕರಣ ದಾಖಲಾಗಿದೆ.

ಭಟ್ಕಳ ನಗರದ ಮುಖ್ಯ ರಸ್ತೆಯಲ್ಲಿ ವರ್ತಕರಿಗೆ ಮಳಿಗೆಗಳನ್ನು ಬಂದ್ ಮಾಡುವಂತೆ ನಿನ್ನೆ ಬಲವಂತ ಪಡಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಫ್ಐ ಸಂಘಟನೆ ಕಾರ್ಯಕರ್ತರು ಹಾಗೂ ವಕೀಲ ಸೇರಿ ನಾಲ್ಕು ಜನರ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಫ್ಐ ಸಂಘಟನೆಯ ಅಜೀಮ್ ಅಹ್ಮದ್ , ಮೊಹಿದ್ದಿನ್ ಅಬೀರ್ ಮತ್ತು ಶಾರೀಕ್ ಹಾಗೂ ವಕೀಲ ತೈಮೂರ್ ಹುಸೇನ್ ಗವಾಯಿ ವಿರುದ್ಧ ಐಪಿಸಿ ಸೆಕ್ಷನ್ 143,147, 290 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ನಿನ್ನೆ ಭಟ್ಕಳ ನಗರದ ಕೆಲವೆಡೆ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ನಡೆಸಿದ್ದರು.

- Advertisement -

Latest News

error: Content is protected !!