Thursday, June 25, 2026
Homeತಾಜಾ ಸುದ್ದಿಪ್ರೇಮಕವಿ ಕೆ.ಕಲ್ಯಾಣ್ ಸಂಸಾರದಲ್ಲಿ ಬಿರುಕು, ಪತ್ನಿ ಕಿಡ್ಯಾಪ್ನ ಆಗಿದ್ದಾರೆ ಅಂತಾ ಪತಿ ದೂರು, ಗಂಡನ ವಿರುದ್ಧ...

ಪ್ರೇಮಕವಿ ಕೆ.ಕಲ್ಯಾಣ್ ಸಂಸಾರದಲ್ಲಿ ಬಿರುಕು, ಪತ್ನಿ ಕಿಡ್ಯಾಪ್ನ ಆಗಿದ್ದಾರೆ ಅಂತಾ ಪತಿ ದೂರು, ಗಂಡನ ವಿರುದ್ಧ ಹೆಂಡ್ತಿ ದೂರು..

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಗೀತ ಸಾಹಿತಿ, ಪ್ರೇಮ ಕವಿ ಕೆ.ಕಲ್ಯಾಣ್ ಹಾಗೂ ಪತ್ನಿ ಅಶ್ವಿನಿ ನಡುವಿನ ದಾಂಪತ್ಯ ಕಲಹ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನನ್ನ ಪತ್ನಿ ಕಿಡ್ಯಾಪ್ ಆಗಿದ್ದಾರೆ ಎಂದು ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ಕೆ.ಕಲ್ಯಾಣ್ ದೂರು ದಾಖಲಿಸಿದ್ದಾರೆ.

ನನ್ನ ಪತ್ನಿ ಅಶ್ವಿನಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಿ ಕೆ.ಕಲ್ಯಾಣ್ ಬೆಳಗಾವಿಯ ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಅಲ್ಲದೇ ಅಶ್ವಿನಿ ಅಕೌಂಟ್ ನಿಂದ 19 ಲಕ್ಷ ರೂ.ಗಳನ್ನು ಬಾಗಲಕೋಟೆಯ ಶಿವಾನಂದ ಎಂಬುವವರು ತಮ್ಮ ಅಕೌಂಟ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆತನೇ ಅಶ್ವಿನಿಯನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದರು.

ಕೆ.ಕಲ್ಯಾಣ್ ದೂರಿನ ಮೇರೆಗೆ ಮಾಳಮಾರುತಿ ಠಾಣೆ ಪೊಲೀಸರು ಇದೀಗ ಅಶ್ವಿನಿಯವರನ್ನು ಹುಡುಕಿ ಠಾಣೆಗೆ ಕರೆ ತಂದಿದ್ದಾರೆ. ಠಾಣೆಗೆ ಬಂದ ಅಶ್ವಿನಿ ತಮ್ಮ ಪತಿಯ ವಿರುದ್ಧವೇ ದೂರು ನೀಡಿದ್ದು, ಪತಿ ಕೆ.ಕಲ್ಯಾಣ್ ತಮಗೆ ಕಿರುಕುಳ ನೀಡುತ್ತಿದ್ದರು. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಹಲವು ವರ್ಷಗಳ ಕಾಲ ಪ್ರೀತಿಸಿ ವಿವಾಹವಾಗಿದ್ದ ಪ್ರೇಮ ಕವಿ ಕೆ.ಕಲ್ಯಾಣ್-ಅಶ್ವಿನಿ ದಾಂಪತ್ಯದಲ್ಲಿ ಇದೀಗ ಬಿರುಕು ಮೂಡಿದೆ ಎನ್ನಲಾಗುತ್ತಿದ್ದು, ದಂಪತಿಯಿಬ್ಬರ ಪರಸ್ಪರ ಹೇಳಿಕೆಗಳು ಕುತೂಹಲಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!