Saturday, June 6, 2026
Homeತಾಜಾ ಸುದ್ದಿಬೆಳ್ತಂಗಡಿಯಲ್ಲಿ ತಲವಾರ್ ಹಿಡಿದು ಕಮ್ಯುನಿಸ್ಟ್ ನಾಯಕನಿಂದ ಕೊಲೆ ಬೆದರಿಕೆ, ವಿಡಿಯೋ ವೈರಲ್

ಬೆಳ್ತಂಗಡಿಯಲ್ಲಿ ತಲವಾರ್ ಹಿಡಿದು ಕಮ್ಯುನಿಸ್ಟ್ ನಾಯಕನಿಂದ ಕೊಲೆ ಬೆದರಿಕೆ, ವಿಡಿಯೋ ವೈರಲ್

- Advertisement -
- Advertisement -

ಬೆಳ್ತಂಗಡಿ : ಕಮ್ಯುನಿಸ್ಟ್ ಪಕ್ಷದ ಋಣಮುಕ್ತ ಹೋರಾಟ ಸಮಿತಿ ರಾಜಾಧ್ಯಕ್ಷ ತಲವಾರ್ ಹಿಡಿದು ಬೆದರಿಕೆ ಹಾಕುವ ವಿಡಿಯೋ ವೈರಲ್ ಅಗಿದೆ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಆಲಡ್ಕ ಎಂಬಲ್ಲಿ ಎರಡು ಮನೆಯವರ ಜಮೀನು ವಿವಾದ ಇರುವಲ್ಲಿಗೆ ತಲವಾರ್ ಹಿಡಿದುಕೊಂಡು ತೆರಳಿದ ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ ಮಂಜುನಾಥ್ ಇನ್ನೊಂದು ಜಾಗದ ಚೆಂಬ ಎಂಬವರಿಗೆ ತಲವಾರ್ ತೋರಿಸಿ ಬೇಲಿ ಹಾಕಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಲಾಗಿದೆ.

ಈ ಬಗ್ಗೆ ವೇಣೂರು ಠಾಣೆಗೆ ದೂರು ನೀಡಲಾಗಿದೆ. ವೇಣೂರು ಪೊಲೀಸರು ಈತನನ್ನು ಘಟನೆ ನಡೆದು ದಿನ ಕಳೆದರೂ ಬಂಧಿಸುವ ಕೆಲಸ ಮಾಡಿಲ್ಲ. ಮಂಜುನಾಥ್ ಲಾಯಿಲ ಹಲವು ಗಲಾಟೆ ,ಡೊಂಬಿಯಲ್ಲಿ ಭಾಗಿಯಾಗಿ ಬೆಳ್ತಂಗಡಿ ಠಾಣೆಯಲ್ಲಿ ರೌಡಿ ಶೀಟರ್ ಕೂಡ ಆಗಿದ್ದಾನೆ.

ಈತ ಮೊದಲು ಮದುವೆಯಾಗಿ ಪತ್ನಿ ಇದ್ದರೂ ಯಾರಿಗೂ ಗೊತ್ತಾಗದಂತೆ ಎರಡನೇ ಮದುವೆಯಾಗಿ ಆಕೆಯ ಹೆಸರಲ್ಲಿ ಲಕ್ಷಾಂತರ ಸಾಲ ತೆಗೆದು ಕೊನೆಗೆ ಅದನ್ನು ತಿರಿಸದೆ ವಂಚನೆ ಮಾಡಿದ್ದಾನೆ ಎಂದು ಎರಡನೇ ಪತ್ನಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಇವನ ಮೇಲೆ ಪ್ರಕರಣ ಕೂಡ ದಾಖಲಾಗಿದೆ.

ಈತ ಬೆಳ್ತಂಗಡಿಯ ಕೊಯ್ಯೂರು ಕ್ರಾಸ್ ಬಳಿ ಟಯರ್ ಪಂಚರ್ ಅಂಗಡಿ ಹಾಕಿ ಜೀವನ ನಡೆಸುತ್ತಿದ್ದಾನೆ. ಮತ್ತೊಂದು ಕಡೆ ಕಮ್ಯುನಿಸ್ಟ್ ಪಕ್ಷದ ಋಣ ಮುಕ್ತ ಹೋರಾಟ ಸಮಿತಿ ರಾಜಾಧ್ಯಕ್ಷ ಎಂದು ಹೆಸರು ಹೇಳಿ ಬೆಳ್ತಂಗಡಿಯ ಜನರನ್ನು ತಲವಾರು ಹಿಡಿದು ಬೆದರಿಸಿ ಈ ರೀತಿ ರೌಡಿಸಂ ಮಾಡುತ್ತಿದ್ದಾನೆ. ಹಾಗಾಗಿ ಪೊಲೀಸರು ಇನ್ನಾದರೂ ಕ್ರಮ ಕೈಗೊಳ್ಳಬೇಕು.

- Advertisement -

Latest News

error: Content is protected !!