Friday, June 5, 2026
Homeಕರಾವಳಿಕಡಬ: ಜ್ಯೂಸ್ ಕುಡಿಯಲು ಬಂದಿದ್ದ ಹಿಂದೂ ಬಾಲಕಿಯ ಫೋಟೋ ತೆಗೆದು ಸ್ಟೇಟಸ್ ಹಾಕಿದ ಮುಸ್ಲಿಂ ಯುವಕ,...

ಕಡಬ: ಜ್ಯೂಸ್ ಕುಡಿಯಲು ಬಂದಿದ್ದ ಹಿಂದೂ ಬಾಲಕಿಯ ಫೋಟೋ ತೆಗೆದು ಸ್ಟೇಟಸ್ ಹಾಕಿದ ಮುಸ್ಲಿಂ ಯುವಕ, ಅಂಗಡಿ ಬಳಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

- Advertisement -
- Advertisement -

ಕಡಬ: ಜ್ಯೂಸ್ ಕುಡಿಯಲೆಂದು ಬಂದಿದ್ದ ಹಿಂದೂ ಬಾಲಕಿಯ ಫೋಟೋ ತೆಗೆದು ವಾಟ್ಸ್‌ಅಪ್ ಸ್ಟೇಟಸ್ ಹಾಕಿದ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜ್ಯೂಸ್ ಸೆಂಟರ್ ಬಳಿ ಜಮಾಯಿಸಿದ ಘಟನೆ ಇಂದು ಸಂಜೆ ಕಡಬದಲ್ಲಿ ನಡೆದಿದೆ.

ಮುಸ್ಲಿಂ ವ್ಯಕ್ತಿಯ ಒಡೆತನದ ಜ್ಯೂಸ್ ಸೆಂಟರ್ ಗೆ ಬಂದಿದ್ದ ಹಿಂದೂ ಬಾಲಕಿಯ ಫೋಟೋವನ್ನು ಕದ್ದು ತೆಗೆದು ನಂತರ ಆ ಫೋಟೋವನ್ನು ಅಂಗಡಿ ಮಾಲಕ ತನ್ನ ವಾಟ್ಸಪ್ ನಲ್ಲಿ ಹಾಕಿ ಆ ಬಳಿಕ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

ಈ ವಿಚಾರ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಗಡಿ ಬಳಿ ಜಮಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿ ಅಂಗಡಿ ಮಾಲಕನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎರಡೂ ಧರ್ಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

- Advertisement -

Latest News

error: Content is protected !!