Saturday, May 4, 2024
Homeಕರಾವಳಿಮಂಗಳೂರು: ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಭಜರಂಗದಳ ತಡೆ ವಿಚಾರ: ಸಿಸಿಟಿವಿ ದೃಶ್ಯ...

ಮಂಗಳೂರು: ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಭಜರಂಗದಳ ತಡೆ ವಿಚಾರ: ಸಿಸಿಟಿವಿ ದೃಶ್ಯ ಪರಿಶೀಲಿಸಿ  ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ:ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿಕೆ

spot_img
- Advertisement -
- Advertisement -

ಮಂಗಳೂರು: ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಭಜರಂಗದಳ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬಲ್ಮಠದ ರಿ-ಸೈಕಲ್ ರೆಸ್ಟೋರೆಂಟ್ ಕಮ್ ಪಬ್ ಬಹಳಷ್ಟು ವರ್ಷಗಳಿಂದ ಇದ್ದು, ನಿನ್ನೆ ರಾತ್ರಿ 9 ಗಂಟೆಗೆ ಸಂಘಟನೆಗೆ ಸೇರಿದ ಐದಾರು ಹುಡುಗರು ಬಂದಿದ್ದಾರೆ. ಈ ವೇಳೆ ಪಬ್ ನ ಬೌನ್ಸರ್ ದಿನೇಶ್ ಗೆ ಮೈನರ್ ಹುಡುಗ-ಹುಡುಗಿ ಇದ್ದಾರೆ ಅಂದಿದ್ದಾರೆ.
ಹೀಗಾಗಿ ಮ್ಯಾನೇಜರ್ ಒಳಗೆ ಹೋಗಿ ಪರಿಶೀಲನೆ ಮಾಡಿದ್ದಾರೆ.‌‌ಆಗ ಸ್ಥಳೀಯ ಕಾಲೇಜಿನ ಕೆಲ ವಿದ್ಯಾರ್ಥಿಗಳು ಇದ್ರು. ಮ್ಯಾನೇಜರ್ ಹೊರಗೆ ಹೋಗಲು ಹೇಳಿದ ಬಳಿಕ ವಿದ್ಯಾರ್ಥಿಗಳು ಹೊರಗೆ ಹೋಗಿದ್ದಾರೆ. ಬೌನ್ಸರ್ ಹೇಳಿದ ಪ್ರಕಾರ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ. ಹೊರ ಭಾಗದಲ್ಲೇ ಮಾತನಾಡಿ ಹೋಗಿದ್ದಾರೆ.
ಸದ್ಯ ಸಿಸಿಟಿವಿ ವೆರಿಫೈ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುತ್ತೀವಿ ಎಂದಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಪಬ್ ಮ್ಯಾನೇಜರ್ ಮತ್ತು ಬೌನ್ಸರ್ ಹೇಳಿಕೆ ಪಡೆಯಲಾಗಿದೆ. ಹೊರಗಿನ ವ್ಯಕ್ತಿಗಳು ಬಂದು ಈ ರೀತಿ ಮಾಡಲು ಅವಕಾಶ ಇಲ್ಲ. ಐಡಿ, ಲೈಸೆನ್ಸ್ ಕೇಳಲು ಬೇರೆಯವರಿಗೆ ಅವಕಾಶ ಇಲ್ಲ. ಈ ಬಗ್ಗೆ ಪರಾಮರ್ಶೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.

ಇನ್ನು ಮೊನ್ನೆ ನಡೆದ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ಪ್ರಕರಣ ಹಿನ್ನೆಲೆಯಲ್ಲೇ ಆಗಿದೆ. ಆದರೆ ಪ್ರಕರಣದ ವಿದ್ಯಾರ್ಥಿಗಳು ಮತ್ತು ಈ ಘಟನೆ ವಿದ್ಯಾರ್ಥಿಗಳಿಗೆ ಸಂಬಂಧ ಇಲ್ಲ. ಅಂತಿಮ ಪದವಿ ವಿದ್ಯಾರ್ಥಿಗಳು ಪಬ್ ಗೆ ಬಂದಿದ್ದರು. ಈ ಪಬ್ ನಲ್ಲಿ ಹಾಕಿರೋ ನಿಯಮದ ಪ್ರಕಾರ 21 ವರ್ಷದ ಮೇಲಿನವರು ಬರಬಹುದು. ಹೀಗಾಗಿ ಈ ಬಗ್ಗೆ ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

- Advertisement -
spot_img

Latest News

error: Content is protected !!