Sunday, May 19, 2024
Homeತಾಜಾ ಸುದ್ದಿಬರುತ್ತಿದೆ ಹೊಸ ಮಾದರಿಯ ಮಾಸ್ಕ್- ವೈರಸ್ ನಿಷ್ಕ್ರಿಯ ಗೊಳಿಸುತ್ತೆ ಸೂಪರ್ ಮಾಸ್ಕ್!….

ಬರುತ್ತಿದೆ ಹೊಸ ಮಾದರಿಯ ಮಾಸ್ಕ್- ವೈರಸ್ ನಿಷ್ಕ್ರಿಯ ಗೊಳಿಸುತ್ತೆ ಸೂಪರ್ ಮಾಸ್ಕ್!….

spot_img
- Advertisement -
- Advertisement -

ಯುನೈಟೆಡ್ ಸ್ಟೇಟ್ಸ್​: ಹಲವು ರೀತಿಯ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಸಡ್ಡು ಮಾಡಿಸುತ್ತಿರುವ ಬೆನ್ನಲ್ಲೇ, ಹೊಸತೊಂದು ಮಾಸ್ಕ್ ಸಾಕಷ್ಟು ಸುದ್ದಿ ಮಾಡುತ್ತಿದೆ. ಯುಎಸ್​ ಬೋಸ್ಟನ್​ ಎಂಐಟಿಯ ವಿಜ್ಞಾನಿಗಳು ಕೊರೊನಾ ಫೇಸ್​ ಮಾಸ್ಕ್​ ತಡೆಗೆ ಹೊಸ ಮಾದರಿಯ ಮಾಸ್ಕ್ ವಿನ್ಯಾಸಗೊಳಿಸಿದ್ದಾರೆ. ಈ ಮಾಸ್ಕ್​ ಕೊರೊನಾ ವೈರಸ್​ ದೇಹದೊಳಕ್ಕೆ ಪ್ರವೇಶಿಸೋದನ್ನ ತಡೆಯೋದರ ಜೊತೆಗೆ ವೈರಸ್​ಗಳನ್ನ ತನ್ನ ಶಾಖದಿಂದ ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನೂ ಹೊಂದಿದೆ.

ಈ ಮಾಸ್ಕ್​ನ್ನ ಮರುಬಳಕೆ ಮಾಡಬಹುದಾಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮಾಸ್ಕ್​ನಲ್ಲಿ ತಾಮ್ರದ ಜಾಲರಿಯನ್ನ ಅಳವಡಿಸಲಾಗಿದೆ. ಈ ಫೇಸ್​ಮಾಸ್ಕ್​ ಧರಿಸಿದ ವ್ಯಕ್ತಿ ಉಸಿರಾಡುತ್ತಿದ್ದಂತೆಯೇ ವೈರಲ್​ ಕಣಗಳು ಜಾಲರಿ ಮೂಲಕ ಹರಿದಾಡುತ್ತದೆ. ಈ ವೇಳೆ ಮಾಸ್ಕ್​​ನಲ್ಲಿ ತಾಪಮಾನ ಹೆಚ್ಚೋದ್ರಿಂದ ವೈರಸ್​ಗಳು ನಿಷ್ಕ್ರಿಯಗೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ .

- Advertisement -
spot_img

Latest News

error: Content is protected !!