Sunday, June 7, 2026
HomeUncategorizedಕಿರುತೆರೆ ನಟಿ ಮೇಲೆ ಅತ್ಯಾಚಾರ; ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅರೆಸ್ಟ್

ಕಿರುತೆರೆ ನಟಿ ಮೇಲೆ ಅತ್ಯಾಚಾರ; ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅರೆಸ್ಟ್

- Advertisement -
- Advertisement -

ಬೆಂಗಳೂರು: ಕಿರುತೆರೆ ನಟಿ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಕಾಮಿಡಿ ಕಿಲಾಡಿಗಳು  ಖ್ಯಾತಿಯ ನಟ ಮಡೆನೂರು ಮನು ಅರೆಸ್ಟ್ ಆಗಿದ್ದಾರೆ. ನಾಳೆ ಅವರ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರಿಲೀಸ್ ಆಗಲಿದ್ದು ಹೀಗಿರುವಾಗಲೇ ಅವರು ಅರೆಸ್ಟ್ ಮಾಡಲಾಗಿದೆ..

ಮಡೆನೂರು ವಿರುದ್ಧ ಕಿರುತೆರೆ ನಟಿಯೊಬ್ಬರು ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ. ಅದರಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಟ ಮಡೆನೂರು ಮನು ಬಂಧಿಸಿದ್ದಾರೆ. ಹಾಸನದ ಶಾಂತಿಗ್ರಾಮದ ಬಳಿ ಮಡೆನೂರು ಮನುರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ಥ ನಟಿಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ವೈದ್ಯಕೀಯ ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇನ್ನು ನನ್ನ ಮೇಲೆ ದಾಖಲಾಗಿರೋ ದೂರು ಸಂಬಂಧ ಸಾಕ್ಷಿ ಸಮೇತ ಬರ್ತೀನಿ. ಇದರ ಹಿಂದೆ ಯಾರಿದ್ದಾರೆ. ಸಿನಿಮಾ ನಿಲ್ಲಿಸೋದಕ್ಕೆ ಯಾರೆಲ್ಲ ಏನು ಮಾಡಿದ್ದಾರೆ. ಸಿನಿಮಾ ಪ್ರಮೋಷನ್ ನೋಡಿ ಯಾರೆಲ್ಲ ನನಗೆ ಬೆದರಿಕೆ ಹಾಕಿದ್ದಾರೆ. ಪ್ರತಿಯೊಂದಕ್ಕೂ ಪ್ರೂಫ್ ಸಮೇತ ಬರ್ತೀನಿ. ನಮ್ಮ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ನಿರ್ಮಾಪಕರು ದೊಡ್ಡ ಬಜೆಟ್​​ನ ಮೂವಿ ಮಾಡಿದ್ದಾರೆ.  ಎರಡೂವರೆ ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಪರ್ಸನಲ್ ಬೇರೆ ಪ್ರೊಫೆಷನಲ್ ಬೇರೆ, ಪರ್ಸನಲ್ ವಿಚಾರ ಏನೇ ಇದ್ರು ನಾನು ಬಂದು ಕ್ಲಾರಿಟಿ ಕೊಡ್ತೀನಿ. ಇದರಿಂದ ಸಿನಿಮಾಗೆ ತೊಂದರೆ ಆಗಬಾರದು ಅಂತ ವಿಡಿಯೋ ಮೂಲಕ ಫಸ್ಟ್​ ರಿಯಾಕ್ಷನ್ ನೀಡಿದ್ದಾರೆ.

- Advertisement -

Latest News

error: Content is protected !!