Saturday, August 29, 2026
Homeಕರಾವಳಿಮೂಡಬಿದ್ರೆಯಲ್ಲಿ ಭಾರೀ ಗಾಳಿ ಮಳೆಗೆ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ

ಮೂಡಬಿದ್ರೆಯಲ್ಲಿ ಭಾರೀ ಗಾಳಿ ಮಳೆಗೆ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ

- Advertisement -
- Advertisement -

ಮೂಡಬಿದಿರೆ: ಧಾರಾಕಾರವಾಗಿ ಸುರಿದ ಭಾರೀ ಗಾಳಿ ಮಳೆಗೆ ಮನೆಯ ಮೇಲೆ ತೆಂಗಿನ ಮರ ಬಿದ್ದು ಅಪಾರ ಹಾನಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪಣಪಿಲದಲ್ಲಿ ನಡೆದಿದೆ.


ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಮಿಲುಕ್ಕು ಸದಾನಂದ ಪೂಜಾರಿ ಅವರ ಮನೆ ಹಾನಿಯಾಗಿ ಅಪಾರ ನಷ್ಟವಾಗಿದೆ. ಮಳೆ ಸಹಿತ ಗಾಳಿ ಬೀಸಿದ್ದು ಈ ಸಂದರ್ಭ ಸಮೀಪವಿದ್ದತೆಂಗಿನ ಮರ ಮನೆಯ ಮೇಲೆ ಬಿದ್ದಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.


ಮನೆಯ ಒಳಗಡೆ ಇದ್ದ ಸದಾನಂದ ಪೂಜಾರಿ ಮತ್ತು ಪತ್ನಿ ಯಶೋಧ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!