Saturday, August 29, 2026
Homeಕರಾವಳಿಮಂಗಳೂರುಮಂಗಳೂರು; ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿ ಪುತ್ರ ನಾಪತ್ತೆ

ಮಂಗಳೂರು; ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿ ಪುತ್ರ ನಾಪತ್ತೆ

- Advertisement -
- Advertisement -

ಮಂಗಳೂರು; ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಎಂಬವರು ಮಾ. 12ರಂದು ಕುಂಜತ್ತಬೈಲಿನಲ್ಲಿರುವ ಮನೆಯಿಂದ ನಾಪತ್ತೆಯಾಗಿದ್ದಾನೆ.

ಬೆಳಗ್ಗೆ 10ಕ್ಕೆ ಮನೆಯಿಂದ ಹೋಗಿದ್ದು, ತನ್ನ ಮೊಬೈಲ್ ಫೋನ್ ಮತ್ತು ಪರ್ಸ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ ಆತನನ್ನು ಯಾರಾದರೂ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುವ ಸಾಧ್ಯತೆಯಿದೆ ಎಂದು ತಂದೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂಲತಃ ಪಶ್ಚಿಮ ಬಂಗಾಳಜಿಲ್ಲೆಯ ಜಡಾಗ್ರಾಮ್ ಜಿಲ್ಲೆಯ ಗೋಪಿಬಲ್ಲವ್ ಪುರ ನಿವಾಸಿಗಳಾಗಿದ್ದು, ಪ್ರಸ್ತುತ ಚಹರೆ: 172 ಸೆಂ.ಮೀ. ಎತ್ತರ, ಕಾಣೆಯಾದ ದಿನ ಬಿಳಿ ಬಣ್ಣದ ಚಪ್ಪಲಿ, ತಿಳಿ ಹಸುರು ಬಣ್ಣದ ರೌಂಡ್ ಟಿ ಶರ್ಟ್, ನೀಲಿಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದ. ಬಿಳಿ ಬಣ್ಣದ ಕನ್ನಡಕ ಧರಿಸಿದ್ದಾನೆ.

ಇಂಗ್ಲೀಷ್, ಹಿಂದಿ, ಓಡಿಯಾ ಭಾಷೆ ಮಾತನಾಡುತ್ತಾನೆ. ಹಣೆಯ ಮೇಲೆ ಮಧ್ಯದಲ್ಲಿ ಕಪ್ಪು ಮಚ್ಚೆ ಇದೆ. ಕುಂಜತ್ತಬೈಲಿನ ಕೋಸ್ಟ್ ಗಾರ್ಡ್ ವಸತಿಗೃಹದಲ್ಲಿ ವಾಸವಾಗಿದ್ದಾರೆ. ಈ ಚಹರೆಯ ಯುವಕನ ಬಗ್ಗೆ ಮಾಹಿತಿ ಇದ್ದಲ್ಲಿ ಕಾವೂರು ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!