Friday, June 5, 2026
Homeಕರಾವಳಿಕೋಳಿ ಅಂಕದ ವೇಳೆ ಹಾರಿದ ಹುಂಜ: ವ್ಯಕ್ತಿಯ ಕಾಲಿಗೆ ಬಾಲ್ ತಾಗಿ ಗಾಯ

ಕೋಳಿ ಅಂಕದ ವೇಳೆ ಹಾರಿದ ಹುಂಜ: ವ್ಯಕ್ತಿಯ ಕಾಲಿಗೆ ಬಾಲ್ ತಾಗಿ ಗಾಯ

- Advertisement -
- Advertisement -

ದಕ್ಷಿಣ ಕನ್ನಡ: ಕೋಳಿ ಅಂಕದ ವೇಳೆ ಹಾರಿದ ಹುಂಜವೊಂದರ ಬಾಲ್ ಅಲ್ಲಿ ಕೋಳಿ ಅಂಕ ವೀಕ್ಷಿಸುತ್ತಿದ್ದ ವ್ಯಕ್ತಿಯ ಕಾಲಿಗೆ ತಾಗಿ ಗಾಯವಾಗಿರುವ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಚೇಳ್ಯಾರು ಗ್ರಾಮದ ಖಂಡಿಗೆ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಚಂದ್ರಹಾಸ ಎಂದು ಗುರುತಿಸಲಾಗಿದೆ. ಮೇ.17 ರಂದು ಸಂಜೆ 4:30 ಗಂಟೆಗೆ ವಾರ್ಷಿಕ ಜಾತ್ರೆ ನಡೆದಿತ್ತು. ಅದರ ಪ್ರಯುಕ್ತ ದೈವಸ್ಥಾನದ ಹಿಂಬದಿ ಗದ್ದೆಯಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಈ ವೇಳೆ ಕೋಳಿ ಅಂಕದಿಂದ ಹಾರಿ ಓಡಿಹೋಗಲು ಯತ್ನಿಸಿದ ಹುಂಜವೊಂದು ಅಲ್ಲೇ ಅಂಕ ವೀಕ್ಷಿಸುತ್ತಿದ್ದ ಚಂದ್ರಹಾಸ ಎಂಬವರ ಬಲಕಾಲಿಗೆ ಬಾಲ್‌ನಿಂದ ತಿವಿದಿದೆ. ಪರಿಣಾಮ ಅವರು ಗಾಯಗೊಂಡಿದ್ದಾರೆ.

- Advertisement -

Latest News

error: Content is protected !!