Tuesday, September 17, 2024
Homeಪ್ರಮುಖ-ಸುದ್ದಿ"ನಿಮ್ಮ ರಾಜ್ಯ ನೋಡಿಕೊಳ್ಳಿ, ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ" : ಶಿವಸೇನೆಗೆ ಯೋಗಿ ಖಡಕ್ ಉತ್ತರ

“ನಿಮ್ಮ ರಾಜ್ಯ ನೋಡಿಕೊಳ್ಳಿ, ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” : ಶಿವಸೇನೆಗೆ ಯೋಗಿ ಖಡಕ್ ಉತ್ತರ

spot_img
- Advertisement -
- Advertisement -

ಲಕ್ನೋ :’ಯುಪಿಯಲ್ಲಿ ಕಾನೂನಿನ ನಿಯಮವಿದೆ. ಇದು ಕಾನೂನನ್ನು ಉಲ್ಲಂಘಿಸುವವರೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸುತ್ತದೆ. ಬುಲಂದ್‌ಶಹರ್ ಹತ್ಯೆಯ ನಂತರ ತ್ವರಿತ ಕ್ರಮ ಕೈಗೊಳ್ಳಲಾಯಿತು ಮತ್ತು ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನವಾಗಿದೆ . ಹಾಗಾಗಿ ನೀವು ನಿಮ್ಮ ಮಹಾರಾಷ್ಟ್ರವನ್ನು ನಿಭಾಯಿಸಿ, ನಮ್ಮ ಯುಪಿ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದಾರೆ.


ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಸಾಧುಗಳ ಬರ್ಬರ ಹತ್ಯೆಗೆ ಸಂಬಂಧಿಸಿ ಶಿವಸೇನೆ ಮುಖಂಡ ಸಂಜಯ್ ರೌತ್ ಹೇಳಿಕೆಗೆ ತಿರುಗೇಟು ನೀಡಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಿಂಗ್ ‘ನೀವು ನಿಮ್ಮ ಮಹಾರಾಷ್ಟ್ರವನ್ನು ನೋಡಿಕೊಳ್ಳಿ ,ನಮ್ಮ ಯುಪಿ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಬುಲಂದ್‌ಶಹರ್ ಹತ್ಯೆಯ ಬಗ್ಗೆ ಯುಪಿ ಮುಖ್ಯಮಂತ್ರಿ ಯೋಗಿಯನ್ನು ಕೆಣಕಿದ ಸಂಜಯ್ ರೌತ್ ನಿನ್ನೆ ಸಂಜೆ ಮೂರು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು, ಅದಕ್ಕೆ ಪ್ರತಿಕ್ರಿಯಿಸಿದ ಯುಪಿ ಸಿಎಂ ಮಹಾರಾಷ್ಟ್ರದ ಪಾಲ್ಘರ್ ಸಾಧುಗಳನ್ನು ಜನಸಮೂಹ ಹತ್ಯೆ ಮಾಡಿದ ಪ್ರಕರಣದಂತೆಯೇ ಇದರ ಬಗ್ಗೆ ಯಾವುದೇ ಕೋಮು ರಾಜಕಾರಣ ಇರಬಾರದು ಎಂದು ಅವರಿಗೆ ಸಲಹೆ ನೀಡಿದರು.
ಪಾಲ್ಘರ್ ಘಟನೆಯ ಬಗ್ಗೆ ತನಿಖೆ ಕೇಳಿದ ಬಿಜೆಪಿ ನಾಯಕರಲ್ಲಿ ಯೋಗಿ ಆದಿತ್ಯನಾಥ್ ಸೇರಿದ್ದಾರೆ; ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಕಳವಳ ವ್ಯಕ್ತಪಡಿಸಿದರು ಮತ್ತು ವಿಚಾರಣೆಗೆ ಕರೆ ನೀಡಿದ್ದರು.
ಉತ್ತರ ಪ್ರದೇಶದಲ್ಲಿ ಸಾಧುಗಳ ಹತ್ಯೆ ಬಳಿಕ ಟ್ವೀಟ್ ಮಾಡಿದ ಸಂಜಯ್ ರಾವುತ್ ‘ಭಯಾನಕ! ಯುಪಿ ಯ ಬುಲಂದ್‌ಶಹರ್‌ನಲ್ಲಿರುವ ದೇವಸ್ಥಾನವೊಂದರಲ್ಲಿ ಇಬ್ಬರು ಸಂತರನ್ನು ಬರ್ಬರ ಹತ್ಯೆಗೈಯ್ಯಲಾಗಿದೆ. ಆದರೆ ಸಂಬಂಧಪಟ್ಟ ಎಲ್ಲರಿಗೂ ಇದರ ಬಗ್ಗೆ ಗಮನ ಹರಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಆದರೆ ಪಾಲ್ಘರ್, ಮಹಾರಾಷ್ಟ್ರ ಘಟನೆಯನ್ನು ಮಾಡಲು ಪ್ರಯತ್ನಿಸಿದ ರೀತಿಯಲ್ಲಿ ಅದನ್ನು ಕೋಮು ದ್ವೇಷ ಹುಟ್ಟಿಸಬೇಡಿ ಎಂದು ನಾನು ಮನವಿ ಮಾಡುತ್ತೇನೆ.’ ಎಂದು ಟ್ವೀಟ್ ಮಾಡಿದ್ದರು.

- Advertisement -
spot_img

Latest News

error: Content is protected !!