Thursday, June 4, 2026
Homeಕರಾವಳಿಬುಧವಾರ ಮೂಡುಬಿದಿರೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ

ಬುಧವಾರ ಮೂಡುಬಿದಿರೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ

- Advertisement -
- Advertisement -

ಬೆಂಗಳೂರು: ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ‌.ಮೂಡಬಿದಿರೆಯಲ್ಲಿ ಅನ್ನದಾಸೋಹ ಕಟ್ಟಡದ ಉದ್ಘಾಟನೆ ಮಾಡಲಿರುವ ಸಿಎಂ, ಬಳಿಕ ಜೈನ ಬಸದಿಗೆ ಭೇಟಿ ಕೊಡಲಿದ್ದಾರೆ.

ಮಧ್ಯಾಹ್ನ 1ಗಂಟೆಗೆ ಮೂಡಿಬಿದರೆ ಪ್ರೆಸ್ ಕ್ಲಬ್ ನಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿರುವ ಸಿಎಂ, ಮಧ್ಯಾಹ್ನ 3 ಗಂಟೆಗೆ ಮೂಡಬಿದಿರೆ ತಾಲ್ಲೂಕು ಆಡಳಿತ ಸೌಧ ಉದ್ಘಾಟನೆ ಹಾಗೂ ವಿಧಾನಸಭೆ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಲಿದ್ದಾರೆ.

ಸಂಜೆ 5.30ಕ್ಕೆ ಮೂಡಿಬಿದರೆಯಿಂದ ಹೊರಟು ರಾತ್ರಿ 7.45ಕ್ಕೆ ಮಂಗಳೂರು ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.‌

- Advertisement -

Latest News

error: Content is protected !!