Friday, June 5, 2026
Homeಕರಾವಳಿಪುತ್ತೂರು ಕಂಬಳದಲ್ಲಿ ನನಗೆ ಯಾರೂ ಹೊಡಿದಿಲ್ಲ, ನಾನೂ ಯಾರಿಗೂ ಹೊಡೆದಿಲ್ಲ; ನಟಿ ಸಾನ್ಯ ಐಯ್ಯರ್ ಸ್ಪಷ್ಟನೆ

ಪುತ್ತೂರು ಕಂಬಳದಲ್ಲಿ ನನಗೆ ಯಾರೂ ಹೊಡಿದಿಲ್ಲ, ನಾನೂ ಯಾರಿಗೂ ಹೊಡೆದಿಲ್ಲ; ನಟಿ ಸಾನ್ಯ ಐಯ್ಯರ್ ಸ್ಪಷ್ಟನೆ

- Advertisement -
- Advertisement -

ಪುತ್ತೂರು; ಇಲ್ಲಿನ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಅತಿಥಿಯಾಗಿ ಬಂದಿದ್ದ ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯ ಐಯ್ಯರ್ ತನಗೆ ಕಿರುಕುಳ ನೀಡಿದ ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಪ್ರತಿಯಾಗಿ ಆತನೂ ಸಾನ್ಯ ಕೆನ್ನೆಗೆ ಬಾರಿಸಿದ್ದಾನೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಬಗ್ಗೆ ಸ್ವತ- ನಟಿ ಸಾನ್ಯ ಪ್ರೇಸ್ ಮೀಟ್ ಮೂಲಕ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕಂಬಳದಲ್ಲಿ ನಾನು ಮೊದಲ ದಿನ ಅತಿಥಿಯಾಗಿ ಹೋಗಿದ್ದೆ. ಅಂದು ಕಂಬಳ ವೀಕ್ಷಿಸಲು ಸಾಧ್ಯವಾಗಿಲ್ಲ.ಅದಕ್ಕೆ ಮರುದಿನ ಹೋಗಿದ್ದೆ. ಆಗ ಯುವಕನೊಬ್ಬ ನನ್ನ ಫ್ರೆಂಡ್ ಕೈ ಹಿಡಿದು ಎಳೆದ. ನಾವು ಅದನ್ನು ಆಯೋಜಕರ ಗಮನಕ್ಕೆ ತಂದೆವು. ಬಳಿಕ ಆತ ಎಲ್ಲಿ ಹೋದ ಗೊತ್ತಿಲ್ಲ. ನಾನು ಯಾರ ಕೆನ್ನೆಗೂ ಹೊಡೆದಿಲ್ಲ. ನನಗೂ ಯಾರೂ ಹೊಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

- Advertisement -

Latest News

error: Content is protected !!