Saturday, May 18, 2024
Homeಮನರಂಜನೆಸಿನಿಪ್ರಿಯರಿಗೆ ಗುಡ್ ನ್ಯೂಸ್ಃ ನಾಳೆಯಿಂದ ಚಿತ್ರಮಂದಿರಗಳು ಓಪನ್

ಸಿನಿಪ್ರಿಯರಿಗೆ ಗುಡ್ ನ್ಯೂಸ್ಃ ನಾಳೆಯಿಂದ ಚಿತ್ರಮಂದಿರಗಳು ಓಪನ್

spot_img
- Advertisement -
- Advertisement -

ಬೆಂಗಳೂರು:_ಬರೋಬ್ಬರಿ ಆರು ತಿಂಗಳುಗಳ ಬಳಿಕ ಕೊನೆಗೂ ಸಿನಿ ಪ್ರಿಯರಿಗೆ ಸಿನಿಮಾ ಥಿಯೇಟರ್ ಗಳಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ಸಿಗಲಿದೆ. ನಾಳೆಯಿಂದ ಚಿತ್ರಮಂದಿರಗಳು ಸಿನಿಮಾ ಪ್ರದರ್ಸನ ಆರಂಭಿಸಲಿವೆ.

ಕೋವಿಡ್ ಮಾರ್ಗಸೂಚಿಗಳ ಅನ್ವಯ ಸಿನಿಮಾ ಥಿಯೇಟರ್ ಗಲು ಕಾರ್ಯ ಆರಂಭಿಸಲಿವೆ.

ಚಿತ್ರಮಂದಿರಗಳು ಅನುಸರಿಸಬೇಕಾದ ಮಾರ್ಗಸೂಚಿಗಳು ಇಂತಿವೆ

*ಸಿನಿಮಾ ಹಾಲ್ನಲ್ಲಿ ಸಾಮಾಜಿಕ ಅಂತರ ಕಡ್ಡಾಯ

*ಕೇವಲ ಶೇಕಡಾ 50 ರಷ್ಟು ಸೀಟುಗಳಿಗಷ್ಟೇ ಅವಕಾಶಟ

*ಖಾಲಿ ಸೀಟ್ ಗುರುತಿಸುವುದು ಕಡ್ಡಾಯ

*ಸಿನಿಮಾ ಹಾಲ್ ಒಳಗೆ ಸ್ಯಾನಿಟೈಜರ್ ವ್ಯವಸ್ಥೆ ಕಡ್ಡಾಯ

*ಮಾಸ್ಕ್ ಇಲ್ಲದೇ ಪ್ರೇಕ್ಷಕರಿಗಿಲ್ಲ ಅವಕಾಶ

*ಪ್ರತಿಯೊಬ್ಬರೂ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್ಲೋಡ್ ಮಾಡುವುದು ಕಡ್ಡಾಯ

*ಪ್ರತಿ ಪ್ರೇಕ್ಷಕರಿಗೂ ತಾಪಮಾನ ಪರೀಕ್ಷೆ ಕಡ್ಡಾಯ

*ಸಿನಿಮಾ ಹಾಲ್ನ ಸಿಬ್ಬಂದಿಯ ಸುರಕ್ಷತೆಗೆ ಕ್ರಮ

*ಥಿಯೇಟರ್ ಸಿಬ್ಬಂದಿಗೆ ಹ್ಯಾಂಡ್ ಗ್ಲೋಸ್, ಪಿಪಿಇ ಕಿಟ್ಗಳು ಮತ್ತು ಮಾಸ್ಕ್ ಕಡ್ಡಾಯ

*ಒಂದು ಶೋನಿಂದ ಇನ್ನೊಂದು ಶೋಗೆ 20-30 ನಿಮಿಷದ ಅಂತರವಿರಬೇಕು.

*ಸಿನಿಮಾ ಹಾಲ್ ತಾಪಮಾನ 24 ರಿಂದ 30 ಡಿಗ್ರಿಗಳ ನಡುವೆ ಇರಬೇಕು.

*ಸಿಂಗಲ್ ಸ್ಕ್ರೀನ್ ಸಿನಿಮಾ ಹಾಲ್ನಲ್ಲಿ ಗಾಳಿಗೆ ವ್ಯವಸ್ಥೆ ಮಾಡಬೇಕು.

*ಕೊರೊನಾದಿಂದ ರಕ್ಷಿಸಲು ಒಂದು ನಿಮಿಷದ ಜಾಗೃತಿ ವಿಡಿಯೋ ತೋರಿಸುವುದು ಕಡ್ಡಾಯ.

ಈ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಸಿನಿಮಾ ಥಿಯೇಟರ್ ಗಳು ಕಾರ್ಯ ನಿರ್ವಹಿಸೋದಕ್ಕೆ ಸೂಚನೆ ನೀಡಲಾಗಿದೆ.

- Advertisement -
spot_img

Latest News

error: Content is protected !!