Wednesday, June 3, 2026
Homeಕರಾವಳಿಬೆಳ್ತಂಗಡಿ : ಹಿರಿಯ ದಲಿತ ನಾಯಕ ಪಿ.ಡೀಕಯ್ಯ ಸಾವು ಪ್ರಕರಣ:ಎರಡನೇ ಸಿಐಡಿ ಟೀಂ ಆಗಮಿಸಿ ತನಿಖೆ

ಬೆಳ್ತಂಗಡಿ : ಹಿರಿಯ ದಲಿತ ನಾಯಕ ಪಿ.ಡೀಕಯ್ಯ ಸಾವು ಪ್ರಕರಣ:ಎರಡನೇ ಸಿಐಡಿ ಟೀಂ ಆಗಮಿಸಿ ತನಿಖೆ

- Advertisement -
- Advertisement -

ಬೆಳ್ತಂಗಡಿ : ದಲಿತ ನಾಯಕ ಪಿ.ಡೀಕಯ್ಯ 2022 ಜುಲೈ 6 ರಂದು ಗರ್ಡಾಡಿ ಮನೆಯಲ್ಲಿ ಅನುಮಾಸ್ಪದ ಸಾವಿನ ಬಗ್ಗೆ ಮೊದಲನೆ ಸಿಐಡಿ ತಂಡ ತನಿಖೆ ನಡೆಸಿತ್ತು ಈಗ ಮತ್ತೆ ಎರಡನೇ ಸಿಐಡಿ ಟೀಂ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಡಿ.22 ರಂದು ಬೆಂಗಳೂರಿನಿಂದ ಸಿಐಡಿಯ ಇನ್ಸ್ಪೆಕ್ಟರ್ ಶಿವರಾಜ್ ತಂಡ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಗಮಿಸಿ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ಅವರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡು ನಂತರ ಒಂದು ವಾರಗಳ ಕಾಲ ವಿವಿಧ ಕಡೆ ತೆರಳಿ ತನಿಖೆ ಮಾಡಿ ತೆರಳಿದ್ದರು. ಈಗ ಎರಡನೇ ಸಿಐಡಿ ತಂಡ ಅಗಮಿಸಿ ತನಿಖೆ ಮಾಡುತ್ತಿದೆ.

ಬೆಂಗಳೂರಿನ ಸಿಐಡಿ ಇನ್ಸ್ಪೆಕ್ಟರ್ ತಿಪ್ಪೆಸ್ವಾಮಿ ನೇತೃತ್ವದ ನಾಲ್ಕು ಜನರ ತಂಡ ಬೆಳ್ತಂಗಡಿಗೆ ಅಗಮಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!