Saturday, June 6, 2026
Homeಕರಾವಳಿಉಡುಪಿಐವಾನ್ ಡಿಸೋಜಾ ಅವರನ್ನು ಎಂಎಲ್ಸಿ ಮಾಡಿ; ಕ್ರೈಸ್ತ ಸಮುದಾಯದ ನಿಯೋಗದಿಂದ ಸಿಎಂಗೆ ಮನವಿ

ಐವಾನ್ ಡಿಸೋಜಾ ಅವರನ್ನು ಎಂಎಲ್ಸಿ ಮಾಡಿ; ಕ್ರೈಸ್ತ ಸಮುದಾಯದ ನಿಯೋಗದಿಂದ ಸಿಎಂಗೆ ಮನವಿ

- Advertisement -
- Advertisement -

ಬೆಂಗಳೂರು: ಮಾಜಿ ವಿಧಾನ ಪರಿಷತ್ ನಾಯಕ ಐವಾನ್ ಡಿಸೋಜ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.

ಬೆಂಗಳೂರಿನಲ್ಲಿ ಇಂದು ಸಿಎಂ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ರೈಸ್ತ ಸಮುದಾಯದ ನಿಯೋಗ ಮನವಿ ಸಲ್ಲಿಸಿದೆ.

ಕ್ರೈಸ್ತ ಸಮುದಾಯಕ್ಕೆ ಒಂದು ಎಂಎಲ್ಸಿ ಸ್ಥಾನ ಕೊಡಲೇಬೇಕು,ನಮ್ಮ ಸಮುದಾಯಕ್ಕೆ ಸಾಕಷ್ಟು ಹೋರಾಟ ನಡೆಸಿದ ಐವನ್ ಡಿಸೋಜಾ ಅವರನ್ನು ಎಂಎಲ್ಸಿ  ಮಾಡಬೇಕು ಎಂದು ಕ್ರೈಸ್ತ ಸಮುದಾಯದ ನಿಯೋಗ ಮನವಿ ಸಲ್ಲಿಸಿದೆ.

ಐವಾನ್ ಡಿಸೋಜ ನನಗೆ ಗೊತ್ತು ಮಾತಾಡುತ್ತೇನೆ ಎಂದು ಕ್ರೈಸ್ತ ಸಮುದಾಯದ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!