Wednesday, June 24, 2026
Homeಕರಾವಳಿಉಡುಪಿಕುನ್ನೂರಿನಲ್ಲಿ ಹೆಲಿಕಾಪ್ಟರ್ ಪತನ: ಅಳಿಯನನ್ನು ಕಳೆದುಕೊಂಡ ಕಾರ್ಕಳದ ಕುಟುಂಬ !

ಕುನ್ನೂರಿನಲ್ಲಿ ಹೆಲಿಕಾಪ್ಟರ್ ಪತನ: ಅಳಿಯನನ್ನು ಕಳೆದುಕೊಂಡ ಕಾರ್ಕಳದ ಕುಟುಂಬ !

- Advertisement -
- Advertisement -

ಕಾರ್ಕಳ: ಕನ್ನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕಾರ್ಕಳದ ಕುಟುಂಬ ತಮ್ಮ ಅಳಿಯನನ್ನು ಕಳೆದುಕೊಂಡಿದ್ದಾರೆ.

ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಅವರು ಕಾರ್ಕಳ ಮೂಲದ ದಿವಂಗತ ಫೆಲಿಕ್ಸ್ ಮೆನೇಜಸ್ ಮತ್ತು ಮೇರಿ ಮೆನೇಜಸ್ ಅವರ ಅಳಿಯ. ಹರ್ಜಿಂದರ್ ಸಿಂಗ್ ಅವರು ಕಾರ್ಕಳದ ಸಾಲ್ಮರದ ದಿವಂಗತ ಫೆಲಿಕ್ಸ್ ಮತ್ತು ಮೇರಿ ಮೆನೇಜಸ್ ಅವರ ಪುತ್ರಿ ಲೆಫ್ಟಿನೆಂಟ್ ಆಗ್ನೆಸ್ ಪ್ರಫುಲ್ಲಾ ಮಿನೇಜಸ್ ಅವರನ್ನು ವಿವಾಹವಾಗಿದ್ದರು.

ಆಗ್ನೆಸ್ ಪ್ರಫುಲ್ಲ ಮಿನೇಜಸ್ ಕೂಡ ಹಲವು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದರು. ಸಲ್ಮಾರಾದಲ್ಲಿರುವ ಕುಟುಂಬದ ಸ್ಥಳೀಯ ಮನೆಗೆ ಅವರು ಕೆಲವು ಬಾರಿ ಭೇಟಿ ನೀಡಿದ್ದರು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.

ಆಗ್ನೆಸ್ ಪ್ರಫುಲ್ಲಾ ಮಿನೇಜಸ್ ಅವರ ತಾಯಿ ಮೇರಿ ಮೆನೆಜಸ್ ಪ್ರಸ್ತುತ ಸಾಲ್ಮರ ಮನೆಯಲ್ಲಿ ವಾಸಿಸುತ್ತಿದ್ದಾರೆ.

- Advertisement -

Latest News

error: Content is protected !!