Wednesday, June 24, 2026
Homeಅಪರಾಧಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ; ನಾಳೆ ಕೊಲೆ ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗದಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ; ನಾಳೆ ಕೊಲೆ ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗದಿ

- Advertisement -
- Advertisement -

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಸೆಷನ್ಸ್‌ ನ್ಯಾಯಾಲಯ ಸೆಪ್ಟೆಂಬರ್.‌25ಕ್ಕೆ ಆರೋಪಿಗಳಾದ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳು ಹಾಜರಾಗುವಂತೆ ಸೂಚನೆ ನೀಡಿದ್ದು, ನಾಳೆಯೇ ದೋಷಾರೋಪಣೆ ನಿಗದಿಪಡಿಸಲಿದೆ.

ಇನ್ನು ಪೊಲೀಸರು ಆರೋಪಿಗಳ ವಿರುದ್ಧ ಹೊರಿಸಿರುವ ರೇಣುಕಾಸ್ವಾಮಿ ಅಪಹರಣ, ಕೊಲೆ, ಸುಲಿಗೆ, ಸಾಕ್ಷ್ಯನಾಶ ಸೇರಿದಂತೆ ಇತರೆ ದೋಷಾರೋಪಗಳು ನಿಗದಿಯಾಗಲಿದೆ.

ದರ್ಶನ್‌ ಸಲ್ಲಿಸಿದ ಜೈಲಿನಲ್ಲಿ ಹಾಸಿಗೆ, ದಿಂಬು ನೀಡಬೇಕಾದ ಆದೇಶ ಪಾಲಿಸುತ್ತಿಲ್ಲ ಎಂಬ ಅರ್ಜಿ ಕುರಿತ ಆದೇಶವನ್ನು ಸೆಪ್ಟೆಂಬರ್.‌25ರಂದು ನ್ಯಾಯಾಲಯ ಪ್ರಕಟಿಸಲಿದೆ.

ಜೈಲಿನ ನಿಯಮದ ಪ್ರಕಾರ ಹಾಸಿಗೆ, ದಿಂಬು, ಮೂಲಸೌಕರ್ಯ ನೀಡುವಂತೆ ಕೋರ್ಟ್‌ ಆದೇಶಿಸಿದ್ದರೂ ಜೈಲು ಅಧಿಕಾರಿಗಳು ಪಾಲಿಸಿಲ್ಲವೆಂದು ದರ್ಶನ್‌ ಅರ್ಜಿ ಸಲ್ಲಿಸಿದ್ದರು. ಈ ಕುರಿತಾದ ಆದೇಶವು ಸೆಪ್ಟೆಂಬರ್.‌25ರಂದು ಪ್ರಕಟವಾಗಲಿದೆ.

- Advertisement -

Latest News

error: Content is protected !!