Friday, May 17, 2024
Homeಕ್ರೀಡೆನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ, 2 ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಲಿನ್‌ ಡಾನ್‌

ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ, 2 ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಲಿನ್‌ ಡಾನ್‌

spot_img
- Advertisement -
- Advertisement -

ಬೀಜಿಂಗ್‌: ಬ್ಯಾಡ್ಮಿಂಟನ್ ದಿಗ್ಗಜ, 2 ಬಾರಿಯ ಒಲಿಂಪಿಕ್‌ ಚಾಂಪಿಯನ್‌,‌ ಚೀನಾದ ಬ್ಯಾಡ್ಮಿಂಟನ್‌ ತಾರೆ ಲಿನ್‌ ಡಾನ್‌ ಅವರು ಕ್ರೀಡಾ ಜೀವನಕ್ಕ ವಿದಾಯ ಹೇಳಿದ್ದಾರೆ. ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂಬ ಹೆಗ್ಗಳಿಕೆಯೂ ಅವರದು.

36 ವರ್ಷದ ಲಿನ್‌ ಅವರು 2008ರ ಬೀಜಿಂಗ್‌ ಹಾಗೂ 2012ರ ಲಂಡನ್‌ ಒಲಿಂಪಿಕ್‌ ಕ್ರೀಡೆಗಳ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಪದಕಕ್ಕೆ ಕೊರಳೊಡ್ಡಿದ್ದರು. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಸ್ಪ‍ರ್ಧಿಸುತ್ತಿಲ್ಲ.

ಅವರ ಕಠಿಣ ಪ್ರತಿಸ್ಪರ್ಧಿ, ಗೆಳೆಯ ಮಲೇಷ್ಯಾದ ಲೀ ಚೊಂಗ್‌ ವಿ ಅವರು ನಿವೃತ್ತಿ ಘೋಷಿಸಿದ ವರ್ಷದ ಬಳಿಕ ಲಿನ್‌ ಕೂಡ ಗುಡ್‌ ಬೈ ಹೇಳಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್‌ ಕೂಡ ಆಗಿದ್ದ ಲಿನ್‌, ದೀರ್ಘಕಾಲ ವಿಶ್ವ ಬ್ಯಾಡ್ಮಿಂಟನ್‌ ಕ್ರಮಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು.

ಲಿನ್, ಕ್ರೀಡಾ ಜೀವನದ ಉತ್ತುಂಗದಲ್ಲಿದ್ದಾಗ ‘ಸೂಪರ್‌ ಡಾನ್‌’ ಎಂದು ಅಡ್ಡ ಹೆಸರು ಗಳಿಸಿದ್ದರು. ಗಾಯಗಳ ಕಾರಣ ಅವರ ಆಟವು ಇತ್ತೀಚಿನ ವರ್ಷಗಳಲ್ಲಿ ಮಂಕಾಗಿತ್ತು.

- Advertisement -
spot_img

Latest News

error: Content is protected !!