Monday, June 8, 2026
Homeತಾಜಾ ಸುದ್ದಿಶತ್ರುರಾಷ್ಟ್ರಗಳೊಡನೆ ಹೋರಾಡಲು ಚೀನಾ ಮಾಡಿದೆ ಹೊಸ ಪ್ಲಾನ್- ತನ್ನ ಸೈನಿಕರ ಜೀನ್‌ ತಿದ್ದಿ ಅತಿಮಾನುಷ ಶಕ್ತಿಗಳಾಗಿ...

ಶತ್ರುರಾಷ್ಟ್ರಗಳೊಡನೆ ಹೋರಾಡಲು ಚೀನಾ ಮಾಡಿದೆ ಹೊಸ ಪ್ಲಾನ್- ತನ್ನ ಸೈನಿಕರ ಜೀನ್‌ ತಿದ್ದಿ ಅತಿಮಾನುಷ ಶಕ್ತಿಗಳಾಗಿ ಪರಿವರ್ತಿಸುವ ಯತ್ನ!..

- Advertisement -
- Advertisement -

ನವದೆಹಲಿ: ಜಗತ್ತಿನಲ್ಲೇ ತನ್ನ ವಿಚಿತ್ರ ನಡೆಗೆ ಫೇಮಸ್ ಆಗಿರುವ ಚೀನಾ ಹೊಸತೊಂದು ಭಯಾನಕ ವಿಷಯಕ್ಕೆ ಚರ್ಚೆಯಲ್ಲಿದೆ.ಚೀನಾ ಭಾರತ, ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳ ವೈರತ್ವವನ್ನು ಕಟ್ಟಿಕೊಂಡಿದ್ದು ಶತ್ರುರಾಷ್ಟ್ರಗಳೊಡನೆ ಹೋರಾಡಲು ತನ್ನ ಸೈನಿಕರ ವಂಶವಾಹಿನಿಯನ್ನೇ ತಿದ್ದಿ, ಅವರಲ್ಲಿ ಅತಿಮಾನುಷ ಶಕ್ತಿ ತುಂಬಿ ಅವರನ್ನು ವಿಚಿತ್ರ ಮಾನವರಾಗಿ ಪರಿವರ್ತಿಸುತ್ತಿದೆ ಎಂಬ ಬಭಯಾನಕ ವರದಿಯನ್ನು ವಿಶ್ವಸಂಸ್ಥೆ ಹೊರಹಾಕಿದೆ.

ಇದಕ್ಕಾಗಿ ಹಲವು ಪ್ರಯತ್ನ ಮಾಡಿದ್ದು, ಪ್ರಯೋಗ ನಡೆಯುತ್ತಿದೆ ಎನ್ನಲಾಗಿದೆ.ಸಿಆರ್‌ಐಎಸ್‌ಪಿಆರ್‌ ಸಾಧನದ ಮೂಲಕ ಚೀನವು, ಸೈನಿಕರ ಜೀನ್‌ಗಳನ್ನು ತಿದ್ದುತ್ತಿದೆ ಎಂದು ಅಮೆರಿಕದ ತಜ್ಞರು ಹೇಳುತ್ತಿದ್ದು ಇದು ಭಾರತಕ್ಕೂ ಆಘಾತಕಾರಿ. ಚೀನಾ, ತನ್ನ ಸೈನ್ಯದಲ್ಲಿ ಲಸಿಕೆ ನೀಡಿ ಸೂಪರ್ ಪವರ್ ತುಂಬಲು ಯತ್ನಿಸುತ್ತಿದೆ ಎನ್ನಲಾಗಿದೆ.ಇದಕ್ಕಾಗಿ ಜೈವಿಕ ತಂತ್ರಜ್ಞಾನದ ಮೊರೆ ಹೋಗಿ ಲಸಿಕೆ ಮೂಲಕ ಅವರಲ್ಲಿ ಅತಿಮಾನುಷ ಶಕ್ತಿ ತುಂಬಿದರೆ ಎಷ್ಟೇ ಚಳಿ,ಮಳೆಯು ಸೈನಿಕರಿಗೆ ಭಾದಿಸುವುದಿಲ್ಲ. ಯಾವ ಸೋಂಕಾಗಲೀ, ಹಸಿವು, ನಿದ್ದೆ, ರೋಗಗಳಾಗಲೀ ಸೈನಿಕರಿಗೆ ಬರುವುದೇ ಇಲ್ಲ ಹಾಗಾಗಿ ಅವರು ಅತಿಮಾನುಷರಾಗಿ ಸೇವೆ ಮಾಡುತ್ತಾರೆ ಎನ್ನಲಾಗುತ್ತಿದೆ.

- Advertisement -

Latest News

error: Content is protected !!