Thursday, April 25, 2024
Homeಮಹಾನ್ಯೂಸ್ಮುಂಬೈನಲ್ಲಿ ರೈಲಿನಲ್ಲಿ ಮಕ್ಕಳ ಪ್ರಯಾಣಕ್ಕೆ ಬಿತ್ತು ಬ್ರೇಕ್ :ಮುಂಬೈ ರೈಲ್ವೆಯಿಂದ ಕಠಿಣ ಮಾರ್ಗಸೂಚಿ

ಮುಂಬೈನಲ್ಲಿ ರೈಲಿನಲ್ಲಿ ಮಕ್ಕಳ ಪ್ರಯಾಣಕ್ಕೆ ಬಿತ್ತು ಬ್ರೇಕ್ :ಮುಂಬೈ ರೈಲ್ವೆಯಿಂದ ಕಠಿಣ ಮಾರ್ಗಸೂಚಿ

spot_img
- Advertisement -
- Advertisement -

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್19 ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಾರದಿರುವಂತೆ ಮುಂಬೈ ರೈಲ್ವೆ ನಿರ್ಭಂದ ಹೇರಿದೆ.

ಈ ಹಿಂದೆಯೇ ನಿಯಮವನ್ನು ಜಾರಿಗೆ ತರಲಾಗಿದ್ದು, ಅದಾಗ್ಯೂ ಮಹಿಳೆಯರು ತಮ್ಮೊಂದಿಗೆ ಮಕ್ಕಳನ್ನು ರೈಲಿನಲ್ಲಿ ಪ್ರಯಾಣಿಸಲು ಕರೆತರುತ್ತಿದ್ದರು. ಇದೀಗ ಮತ್ತೊಮ್ಮೆ ಮಾರ್ಗಸೂಚಿ ಹೊರಡಿಸಲಾಗಿದ್ದು, ರೈಲುಗಳಲ್ಲಿ ಮಕ್ಕಳು ಪ್ರಯಾಣ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿ ರೈಲ್ವೆ ನಿಲ್ದಾಣಗಳ ದ್ವಾರದ ಬಳಿ ಆರ್.ಪಿ.ಎಫ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಈ ನಿಯಮಗಳು ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಮಾರ್ಗಗಳೆರಡಕ್ಕೂ ಅನ್ವಯವಾಗಲಿದ್ದು, ಇದಕ್ಕೆ ಡಿ.ಆರ್.ಎಮ್ ಮತ್ತು ಮುಂಬೈ ಸೆಂಟ್ರಲ್ ರೈಲ್ವೆ ಕೂಡಾ ಅನುಮತಿ ನೀಡಿವೆ.ಮಹಾರಾಷ್ಟ್ರ ಸರ್ಕಾರ ಕಳೆದ ಅಕ್ಟೋಬರ್ ನಲ್ಲಿ ‘ ಬಿಗಿನ್ ಅಗೇನ್’ ಮಿಷನ್ ನ ಅಡಿಯಲ್ಲಿ ಅನಿವಾರ್ಯ ಕಾರ್ಯಗಳ ಸಂದರ್ಭದಲ್ಲಿ ಮತ್ತು ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ನಿಗದಿತ ಸಮಯದಲ್ಲಿ ರೈಲು ಪ್ರಯಾಣ ಮಾಡಲು ಅವಕಾಶ ಕಲ್ಪಿಸಿತ್ತು.

- Advertisement -
spot_img

Latest News

error: Content is protected !!