Friday, June 5, 2026
Homeಕರಾವಳಿಬಂಟ್ವಾಳ; ಶಾಲೆಗೆ ತೆರಳುತ್ತಿದ್ದ ಮಕ್ಕಳನ್ನು ಅಪಹರಿಸಲು ಯತ್ನ ಆರೋಪ

ಬಂಟ್ವಾಳ; ಶಾಲೆಗೆ ತೆರಳುತ್ತಿದ್ದ ಮಕ್ಕಳನ್ನು ಅಪಹರಿಸಲು ಯತ್ನ ಆರೋಪ

- Advertisement -
- Advertisement -

ಬಂಟ್ವಾಳ: ಶಾಲೆಗೆ ತೆರಳುತ್ತಿದ್ದ ಮಕ್ಕಳನ್ನು ಅಪಹರಣ ಮಾಡಲು ಯತ್ನಿಸಿದ್ದಾರೆ  ಎಂಬ ಆರೋಪ ಬಂಟ್ವಾಳದ ಮಣಿನಾಲ್ಕೂರು ಗ್ರಾಮದಲ್ಲಿ ಕೇಳಿ ಬಂದಿದೆ.

ಡಿ‌.14 ರಂದು ಇಬ್ಬರು ಮಕ್ಕಳು ತಮ್ಮ ಮನೆಯಿಂದ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕುಟ್ಟಿಕಳ ಹಿ.ಪ್ರಾ.ಶಾಲೆಗೆ  ತೆರಳುತ್ತಿದ್ದ ವೇಳೆ ಕಾರೊಂದರಲ್ಲಿ ಬಂದ ವ್ಯಕ್ತಿ ಮಕ್ಕಳ ಅಂಗಿ ಎಳೆಯಲು ಯತ್ನಿಸಿದ್ದು, ಈ ವೇಳೆ ಮಕ್ಕಳ ಅಂಗಿಯ ಬಟನ್ ಗಳು ಎದ್ದು ಹೋಗಿದ್ದರಿಂದ  ತಪ್ಪಿಸಿಕೊಂಡು ಮಕ್ಕಳು ಬಜಾವ್‌ ಆಗಿದ್ದಾರೆ.

ಘಟನೆಯ ಕುರಿತು ಮಕ್ಕಳು ತಕ್ಷಣ ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ ಪೊಲೀಸರು ಘಟನೆಯ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!