Friday, June 5, 2026
Homeಕರಾವಳಿಉಪ್ಪಿನಂಗಡಿ: ಕಂಟೈನರ್ ಲಾರಿ‌ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ

ಉಪ್ಪಿನಂಗಡಿ: ಕಂಟೈನರ್ ಲಾರಿ‌ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ

- Advertisement -
- Advertisement -

ಉಪ್ಪಿನಂಗಡಿ; ಕಂಟೈನರ್ ಲಾರಿ‌ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಟ್ರಾಕ್ಟರ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಡೆದಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಕಂಟೈನರ್ ಲಾರಿಯೊಂದು ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿ13 ರಂದು ಸಂಜೆ ಘಟನೆ ನಡೆದಿದ್ದು ನೆಲ್ಯಾಡಿ ಕಡೆಯಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯು ಅದೇ ಮಾರ್ಗವಾಗಿ ಹೋಗುತ್ತಿದ್ದ ಟ್ರಾಕ್ಟರ್ ಅನ್ನು ಗಾಂಧಿಪಾರ್ಕ್ ಬಳಿ ಓವರ್‌ಟೇಕ್ ಮಾಡಿದ್ದು, ಆಗ ಟ್ರಾಕ್ಟರ್‌ಗೆ ಕಂಟೈನರ್ ಲಾರಿಯು ಡಿಕ್ಕಿ ಹೊಡೆದಿದೆ.

ಘಟನೆಯಿಂದ ಟ್ರಾಕ್ಟರ್‌ನ ಎಂಜಿನ್‌ನ ಭಾಗ ರಸ್ತೆಯಲ್ಲಿ ನೇರವಾಗಿ ನಿಂತಿದ್ದರೆ, ಅದರ ಹಿಂದಿನ ಟ್ರಾಲಿ ಪಲ್ಟಿಯಾಗಿತ್ತು. ಅಪಘಾತದಿಂದಾಗಿ ಕೆಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!