Friday, May 17, 2024
Homeತಾಜಾ ಸುದ್ದಿ15 ಲಕ್ಷದ ಆಸೆಗೆ ಮಗು ಕದ್ದ ವೈದ್ಯೆ: ಒಂದು ವರ್ಷದ ಬಳಿಕ ಡಾಕ್ಟರ್ ಅರೆಸ್ಟ್

15 ಲಕ್ಷದ ಆಸೆಗೆ ಮಗು ಕದ್ದ ವೈದ್ಯೆ: ಒಂದು ವರ್ಷದ ಬಳಿಕ ಡಾಕ್ಟರ್ ಅರೆಸ್ಟ್

spot_img
- Advertisement -
- Advertisement -

ಬೆಂಗಳೂರು: ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಒಂದು ವರ್ಷದ ಹಿಂದೆ ನವಜಾತ ಶಿಶು ಕಳ್ಳತನವಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಬೆಂಗಳೂರಿನ ತಲಘಟ್ಟಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರ ಕರ್ನಾಟಕ ಮೂಲದ ರಶ್ಮಿ ಎಂಬ ವೈದ್ಯೆ ಬಂಧಿತ ಆರೋಪಿಯಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ 2020ರ ಮೇ.29ರಂದು ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಹುಸ್ನಾಬಾನು ಎಂಬವರ ಮಗು ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ಪ್ರಕರಣ ಸಂಬಂಧ ಪೊಲೀಸರು ಆರೋಪಿಯ ರೇಖಾಚಿತ್ರ ರಚಿಸಿ ಹುಡುಕಲಾರಂಭಿಸಿದಾಗ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ ಉತ್ತರ ಕರ್ನಾಟಕ ಮೂಲದ ಮನೋ ವೈದ್ಯೆಯೊಬ್ಬರ ಬುದ್ಧಿ ಮಾಂದ್ಯತೆಯಿಂದ ಕೂಡಿದ್ದ ಮಗುವೊಂದಕ್ಕೆ ಈಕೆ ಚಿಕಿತ್ಸೆ ಕೊಡುತ್ತಿದ್ದಳು ಎನ್ನಲಾಗಿದ್ದು, ಆ ಮಗುವಿನ ದಂಪತಿ ಇನ್ನೊಂದು ಮಗುವಿಗಾಗಿ ಪ್ರಯತ್ನ ಪಟ್ಟು ವಿಫಲವಾದ ಹಿನ್ನೆಲೆ ಅವರಿಬ್ಬರ ಅಂಡಾಣು ಮತ್ತು ವೀರ್ಯಾಣುವನ್ನು ಪಡೆದಿದ್ದ ಆರೋಪಿಯು, ಬೇರೊಬ್ಬ ಮಹಿಳೆಯ ಗರ್ಭಕ್ಕೆ ಸೇರಿಸಿ ಮಗುವನ್ನು ಬೆಳೆಸುವುದಾಗಿ ಹೇಳಿ ನಂಬಿಸಿದ್ದಳು. ಬಳಿಕ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ಆಟೋ ಬಂದ ವೈದ್ಯೆ ಮಗುವನ್ನು ಕದ್ದು ಪರಾರಿಯಾಗಿದ್ದಳು. ಆ ಮಗುವನ್ನು ದಂಪತಿಗೆ ಕೊಟ್ಟು 15 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿದ್ದಳು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.

- Advertisement -
spot_img

Latest News

error: Content is protected !!