Thursday, June 25, 2026
Homeಕರಾವಳಿಕಾಣಿಯೂರಿನ ಪುಣ್ಚತ್ತಾರಿನಲ್ಲಿ ನೀರಿನಲ್ಲಿ ಮುಳುಗಿ ಮಗು ಸಾವು

ಕಾಣಿಯೂರಿನ ಪುಣ್ಚತ್ತಾರಿನಲ್ಲಿ ನೀರಿನಲ್ಲಿ ಮುಳುಗಿ ಮಗು ಸಾವು

- Advertisement -
- Advertisement -

ಸವಣೂರು ಹೆತ್ತವರೊಂದಿಗೆ ಹೊಳೆಗೆ ಬಟ್ಟೆ ತೊಳೆಯಲು ಹೋದ ಮಗುವೊಂದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪುಣ್ಚತ್ತಾರಿನ ಬೈತ್ತಡ್ಕ ಹೊಳೆಯಲ್ಲಿ ನಡೆದಿದೆ.

ಮುರುಳ್ಯ ಗ್ರಾಮದ ಪೊಗ್ಗೊಳಿ ನಿವಾಸಿಗಳಾದ ಪ್ರೇಮ ಹಾಗೂ ಚಂದ್ರಶೇಖರ್ ರೈ ದಂಪತಿಯ ಒಂದೂವರೆ ವರ್ಷದ ಮಗು ಗ್ರೀಷ್ಮ ತಾಯಿಯೊಂದಿಗೆ ಬಟ್ಟೆ ತೊಳೆಯಲು ಹೊಳೆಗೆ ತೆರಳಿದ್ದಾಳೆ.ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದಾಳೆ. ಕೂಡಲೇ ಚಂದ್ರಶೇಖರ್ ರೈ ಹಾಗೂ ಸ್ಥಳೀಯರು  ಆಕೆಯನ್ನು ಮೇಲಕ್ಕೆತ್ತಿ  ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ. ಮಗುವಿನ ಅಕಾಲಿಕ ನಿಧನ ಕುಟುಂಸ್ಥರನ್ನು ದುಃಖದ ಕಡಲಿನಲ್ಲಿ ಮುಳುಗಿಸಿದೆ.

- Advertisement -

Latest News

error: Content is protected !!