Friday, April 19, 2024
Homeಕರಾವಳಿಬೆಳ್ತಂಗಡಿ ಮುಂಡಾಜೆ ಬಳಿ ರಸ್ತೆ ಬದಿ ಪತ್ತೆಯಾಯ್ತು 150ಕ್ಕೂ ಹೆಚ್ಚು ಸೇಲಂ ಕೋಳಿಗಳು; ಕೋಳಿ ಹಿಡಿಯೋಕೆ...

ಬೆಳ್ತಂಗಡಿ ಮುಂಡಾಜೆ ಬಳಿ ರಸ್ತೆ ಬದಿ ಪತ್ತೆಯಾಯ್ತು 150ಕ್ಕೂ ಹೆಚ್ಚು ಸೇಲಂ ಕೋಳಿಗಳು; ಕೋಳಿ ಹಿಡಿಯೋಕೆ ಎದ್ನೋ ಬಿದ್ನೋ ಅಂತಾ ಓಡಿ ಬಂದ ಜನ

spot_img
- Advertisement -
- Advertisement -

ಬೆಳ್ತಂಗಡಿ; ಫ್ರೀಯಾಗಿ ಸಿಕ್ರೆ ನನ್ಗೂ ಇರ್ಲಿ ನನ್ನ ಮನೆಯೋರಿಗೂ ಇರ್ಲಿ ಅನ್ನೋ ಜನಾನೇ ಹೆಚ್ಚು. ಹೆಂಗಾದ್ರೂ ಸರಿ ಗುರು ಅಂತಾ ಉಚಿತವಾಗಿ ಸಿಗೋದನ್ನು ಪಡೆಯೋಕೆ ಮುಗಿ ಬೀಳ್ತಾರೆ. ಅಂತದಹ್ಹೇ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ರಾಷ್ಟ್ರೀಯ ಹೆದ್ದಾರಿ 73ರ ಮುಂಡಾಜೆ ಪ್ರದೇಶ ಸೀಟು ಎಂಬಲ್ಲಿ ಅರಣ್ಯದಲ್ಲಿ 150ಕ್ಕೂ ಕೋಳಿಗಳು ಅನಾಥ ಸ್ಥಿತಿಯಲ್ಲಿದ್ದು, ಜನ ಇಡೀ ಅರಣ್ಯ ಜಾಲಾಡಿ, ಎದ್ದು, ಬಿದ್ದು ಒಡಾಡಿ ಕೋಳಿ ಹಿಡಿದು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಸೀಟು ರಕ್ಷಿತಾರಣ್ಯದ ರಸ್ತೆ ಬದಿ 150ಕ್ಕೂ ಹೆಚ್ಚು ಸೇಲಂ ಕೋಳಿಗಳು ಅನಾಥವಾಗಿ ತಿರುಗಾಡುತ್ತಿರುವ ವಿಚಾರ ಹಬ್ಬಿತು. ಸುತ್ತ-ಮುತ್ತಲಿನ ಜನ ಕೈಗೆ ಸಿಕ್ಕಷ್ಟು ಕೋಳಿಗಳನ್ನು ಕೈ ಚೀಲ, ಗೋಣಿಗಳಲ್ಲಿ ಹಾಕಿ, ಕೆಲವೊಂದನ್ನು ಹೆಗಲೇರಿಸಿ ಕೊಂಡು ಹೋಗಿದ್ದಾರೆ‌.

ಇದೇ ವೇಳೆ 50 ಕ್ಕೂ ಹೆಚ್ಚು ಕೋಳಿಗಳ ಕಳೇಬರ ಕಾಣಿಸಿದ್ದು ಅನಾರೋಗ್ಯದಿಂದ ಬಳಲಿರುವ ಕೋಳಿಗಳನ್ನು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಮುಂಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಂಜಿನಿ ಮಧು ಈ ಕುರಿತು ಮಾತನಾಡಿದ್ದು, ಜನರು ಕೋಳಿಗಳನ್ನು ಆಹಾರಕ್ಕೆ ಬಳಸದಂತೆ ವಿನಂತಿ ಮಾಡಿದ್ದಾರೆ. ಪಶುವೈದ್ಯಾಧಿಕಾರಿಗಳಿಗೆ ಕೋಳಿಗಳ ಆರೋಗ್ಯ ಪರಿಸ್ಥಿತಿ ಬಗ್ಗೆ ಪರೀಶಿಲಿಸುವಂತೆ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!