Friday, May 3, 2024
Homeತಾಜಾ ಸುದ್ದಿಇಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಲಿವೆ 12 ಚಿರತೆಗಳು

ಇಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಲಿವೆ 12 ಚಿರತೆಗಳು

spot_img
- Advertisement -
- Advertisement -

ವದೆಹಲಿ: ಇಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಭಾರತಕ್ಕೆ ಆಗಮಿಸಲಿವೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ. ಭಾರತೀಯ ವಾಯುಪಡೆಯ ಸಿ -17 ಗ್ಲೋಬ್ಮಾಸ್ಟರ್ ಕಾರ್ಗೋ ವಿಮಾನವು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಲಾಗುತ್ತಿದೆ.ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಚೀತಾ ಮರುಪರಿಚಯಿಸುವ ಯೋಜನೆಯಡಿಯಲ್ಲಿ ಪ್ರಧಾನಿ ಮೋದಿ ಅವರು 2022 ರ ಸೆಪ್ಟೆಂಬರ್ 17 ರಂದು ತಮ್ಮ 72 ನೇ ಜನ್ಮದಿನದಂದು ನಮೀಬಿಯಾದಿಂದ ತಂದ 8 ಚೀತಾಗಳನ್ನು ಮಧ್ಯಪ್ರದೇಶದ ಕುನು ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದರು ಆಗ ತಂದುಬಿಟ್ಟಿದ್ದ ಚೀತಾಗಳು ಕುನು ಉದ್ಯಾನವನದಲ್ಲಿ ಪ್ರತಿ 3-4 ದಿನಗಳಿಗೊಮ್ಮೆ ಬೇಟೆಯಾಡುತ್ತಿದ್ದು, ಆರೋಗ್ಯವಾಗಿವೆ. ಆದರೆ ಈ ಪೈಕಿ ಒಂದು ಚೀತಾಗೆ ಕ್ರಿಯಾಟಿನ್ ಮಟ್ಟ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಚಿಕಿತ್ಸೆ ಬಳಿಕ ಆ ಚೀತಾ ಸುಧಾರಿಸಿಕೊಂಡಿದೆ.ಇಂದು ಶಿವರಾತ್ರಿ ಹಬ್ಬದಂದು ಮತ್ತೆ 12 ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನವನ ಸೇರುತ್ತಿವೆ.

- Advertisement -
spot_img

Latest News

error: Content is protected !!