Thursday, June 25, 2026
Homeಕರಾವಳಿಸುಳ್ಯ; ;ಚೆಂಬುವಿನಲ್ಲಿ ತಮ್ಮಂದಿರಿಂದಲೇ ಅಣ್ಣನ ಕೊಲೆ ಪ್ರಕರಣ; ಕೊಲೆ ಮಾಡಲು ಚೂರಿ  ನೀಡಿದ ಆರೋಪಿಯ ಬಂಧನ

ಸುಳ್ಯ; ;ಚೆಂಬುವಿನಲ್ಲಿ ತಮ್ಮಂದಿರಿಂದಲೇ ಅಣ್ಣನ ಕೊಲೆ ಪ್ರಕರಣ; ಕೊಲೆ ಮಾಡಲು ಚೂರಿ  ನೀಡಿದ ಆರೋಪಿಯ ಬಂಧನ

- Advertisement -
- Advertisement -

ಸುಳ್ಯ; ;ಚೆಂಬುವಿನಲ್ಲಿ ತಮ್ಮಂದಿರಿಂದಲೇ ಅಣ್ಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲು ಚೂರಿ  ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ (37 ವರ್ಷ) ಬಂಧಿತ ಆರೋಪಿ.

ಉಸ್ಮಾನ್‌ರನ್ನು ಕೊಲೆಗೈಯ್ಯಲು ಅವರ ಸಹೋದರರಾದ ರಫೀಕ್ ಮತ್ತು ಸತ್ತಾರ್ ಉಪಯೋಗಿಸಿದ ಚೂರಿಯನ್ನು ಅರಂತೋಡಿನಲ್ಲಿರುವ ಸಹೋದರ ಮುಬಾರಕ್ ಒದಗಿಸಿದ್ದನೆಂದು ಪೊಲೀಸರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಮುಬಾರಕ್  ಸುಳ್ಯ ಜೂನಿಯರ್ ಕಾಲೇಜು ಸಮೀಪದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದ. ಕೊರೋನಾ ಬಳಿಕ ಬೇಕರಿ ಬಂದ್ ಮಾಡಿ ಊರಿಗೆ ಬಂದು ನೆಲೆಸಿರುವ ಆತನಲ್ಲಿ ಬೇಕರಿಯ ಬ್ರೆಡ್ ಮತ್ತಿತರ ವಸ್ತುಗಳನ್ನು ಕತ್ತರಿಸುವ ಗಟ್ಟಿಯಾದ ಚೂರಿ ಇತ್ತೆನ್ನಲಾಗಿದೆ.

ತನ್ನ ಚಿಕ್ಕಪ್ಪ ಮತ್ತು ದೊಡ್ಡಪ್ಪ ಚೂರಿ ಕೇಳಿದ್ದರಿಂದ ಕೊಲೆ ನಡೆಯುವ ಹಿಂದಿನ ದಿನ ಮುಬಾರಕ್ ಆ ಚೂರಿಯನ್ನು ಅವರಿಗೆ ಕೊಟ್ಟಿದ್ದ ಎನ್ನಲಾಗಿದೆ. ಕೊಲೆ ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ್ ಉಪ್ಪಳಿಕೆಯವರು ಜು. 27ರಂದು ಸುಳ್ಯಕ್ಕೆ ದಾಳಿ ನಡೆಸಿ ಮುಬಾರಕ್‌ನನ್ನು ಬಂಧಿಸಿದ್ದಾರೆ. ನಿನ್ನೆ ಆರೋಪಿಯನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!