Thursday, July 16, 2026
Homeಕರಾವಳಿಮಂಗಳೂರು: ವೈಷ್ಣೋದೇವಿ ಮಂದಿರದ ಕಾಯಿನ್‌ ಹೆಸರಲ್ಲಿ ವಂಚನೆ

ಮಂಗಳೂರು: ವೈಷ್ಣೋದೇವಿ ಮಂದಿರದ ಕಾಯಿನ್‌ ಹೆಸರಲ್ಲಿ ವಂಚನೆ

- Advertisement -
- Advertisement -

ಮಂಗಳೂರು: ವೈಷ್ಣೋದೇವಿ ಮಂದಿರ ಕಾಯಿನ್‌ ಅನ್ನು ಉತ್ತಮ ಬೆಲೆ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೆನ್‌ ಠಾಣೆಯಲ್ಲಿ ದಾಖಲಾಗಿದೆ.

ದೂರುದಾರರು ಫೇಸ್‌ಬುಕ್‌ ನೋಡುತ್ತಿದ್ದಾಗ ಅದರಲ್ಲಿ ವೈಷ್ಣೋದೇವಿಯ ಮಂದಿರದ ಕಾಯಿನ್‌ ಇದ್ದರೆ ಅದಕ್ಕೆ ಉತ್ತಮ ಬೆಲೆ ನೀಡುವುದಾಗಿ ಜಾಹೀರಾತು ಇತ್ತು.ಅದನ್ನು ನಂಬಿದ ದೂರುದಾರರು ಜಾಹೀರಾತಿನಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದರು.

ಕರೆ ಸ್ವೀಕರಿಸಿದ ವ್ಯಕ್ತಿ ಕಾಯಿನ್‌ಗಳಿಗೆ 24.56 ಲ.ರೂ ನೀಡುವುದಾಗಿ ಹೇಳಿದ. ಬಳಿಕ ಹಂತ ಹಂತವಾಗಿ ದೂರುದಾರರಿಂದಲೇ 27,700 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!