Tuesday, June 18, 2024
Homeತಾಜಾ ಸುದ್ದಿ‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಪಕರಿಂದ ಮೋಸ; ಜಾರಿ ನಿರ್ದೇಶನಾಲಯದಿಂದ ಬಂತು ನೋಟಿಸ್

‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಪಕರಿಂದ ಮೋಸ; ಜಾರಿ ನಿರ್ದೇಶನಾಲಯದಿಂದ ಬಂತು ನೋಟಿಸ್

spot_img
- Advertisement -
- Advertisement -

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್​ನಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಇದೀಗ ಈ ಚಿತ್ರದ ನಿರ್ಮಾಪಕರಿಗೆ ತೊಂದರೆ ಎದುರಾಗಿದೆ.

‘ಮಂಜುಮ್ಮೇಲ್ ಬಾಯ್ಸ್’ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿನಿರ್ಮಾಪಕರು ಸಂಕಷ್ಟ ಎದುರಿಸಿದ್ದಾರೆ. ಈ ಸಿನಿಮಾದ ನಿರ್ಮಾಪಕರಾದ ಸೌಬಿನ್ ಶಾಹಿರ್, ಶಾನ್ ಆ್ಯಂಥೋನಿ, ಬಾಬು ಶಾಹಿರ್​ಗೆ ನೋಟಿಸ್ ನೀಡಲಾಗಿದೆ. ಕೊಚ್ಚಿಯಲ್ಲಿರುವ ಇವರ ಕಚೇರಿಗೆ ನೋಟಿಸ್ ಹೋಗಿದೆ. ಇವರು ಶೀಘ್ರವೇ ‘ಇಡಿ’ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಿದೆ.

ಎರ್ನಾಕುಲಂನ ಮರಾಡು ಪೊಲೀಸ್ ಠಾಣೆಯವರು ಕೇರಳ ಹೈಕೋರ್ಟ್​ಗೆ ವರದಿ ಒಂದನ್ನು ಸಲ್ಲಿಕೆ ಮಾಡಿದ್ದರು. ‘ಮಂಜುಮ್ಮೇಲ್ ಬಾಯ್ಸ್’ ತಂಡದವರು ಹಗರಣ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ಚಿತ್ರಕ್ಕೆ ಸಿರಾಜ್ ಎಂಬ ವ್ಯಕ್ತಿ 7 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಸಿನಿಮಾದಿಂದ ಬಂದ ಒಟ್ಟೂ ಲಾಭದಲ್ಲಿ ಶೇ. 40ರಷ್ಟು ಲಾಭವನ್ನು ಇವರಿಗೆ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ, ಹೂಡಿಕೆದಾರ ಸಿರಾಜ್​ಗೆ ಈ ಮೊತ್ತ ಸಿಕ್ಕಿಲ್ಲ. ಅವರಿಗೆ ಕೇವಲ 50 ಲಕ್ಷ ರೂಪಾಯಿ ಮಾತ್ರ ಸಿಕ್ಕಿದೆ ಎನ್ನಲಾಗಿದೆ. ಈ ಚಿತ್ರ 250 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಕಮರ್ಷಿಯಲ್ ಕೋರ್ಟ್​ಗೆ ಸಿರಾಜ್ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಬಳಿಕ ಅವರು ಮರಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು. ತಮಗೆ ಮೋಸ ಆಗಿದೆ ಎಂದು ಅವರು ಹೇಳಿದ್ದರು. ಈಗ ಜಾರಿ ನಿರ್ದೇಶನಾಲಯದ ನೋಟಿಸ್​ಗೆ ನಿರ್ಮಾಪಕರು ಯಾವ ರೀತಿ ಉತ್ತರಿಸುತ್ತಾರೆ ನೋಡಬೇಕಿದೆ.

- Advertisement -
spot_img

Latest News

error: Content is protected !!