Saturday, October 17, 2026
Homeಕರಾವಳಿಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಗಳ ಚಾತುರ್ಮಸ್ಯ  ವೃತಾಚರಣೆ ಪ್ರಾರಂಭ

ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಗಳ ಚಾತುರ್ಮಸ್ಯ  ವೃತಾಚರಣೆ ಪ್ರಾರಂಭ

- Advertisement -
- Advertisement -

 ಧರ್ಮಸ್ಥಳ :ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು  ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ “ಚಾತುರ್ಮಾಸ್ಯ ವ್ರತಾರಂಭ” ಜು.03 ರಂದು  ಶ್ರೀಗುರುದೇವ ಮಠದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಹಾಗು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ್ ಎಸ್. ವೈದ್ಯ ಉದ್ಘಾಟಿಸಿದರು. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಗುರುದೇವ ಮಠದ ಟ್ರಷ್ಟಿ ಚಿತ್ತರಂಜನ್ ಗರೋಡಿ, ಶ್ರೀ ರಾಮ ಕ್ಷೇತ್ರ ಸಮಿತಿ ತಾಲೂಕು ಸಂಚಾಲಕ ಜಯಂತ ಕೋಟ್ಯಾನ್, ಭಟ್ಕಳ ತಾಲೂಕು ಸಮಿತಿ ಅಧ್ಯಕ್ಷ ಎಸ್. ಎನ್. ನಾಯ್ಕ್,  ಶ್ರೀಮತಿ ಪುಷ್ಪಲತಾ ಮಾಂಕಳ್ ವೈದ್ಯ ಪ್ರಮುಖರಾದ ಶ್ರೀಧರ ನಾಯ್ಕ್, ಗೋವಿಂದ  ನಾಯ್ಕ್, ಆರ್. ಜೆ. ನಾಯ್ಕ್, ಕೃಷ್ಣ ನಾಯ್ಕ್ ಹೊನ್ನಾವರ, ಸುಬ್ರಾಯ ನಾಯ್ಕ್, ಎಸ್. ರಾಜು ಪೂಜಾರಿ ಬೆಂಗಳೂರು, ಸಂಜೀವ ಪೂಜಾರಿ ಮೆಲ್ಕಾರ್, ಬೇಬಿ ಕುಂದರ್ ಬಂಟ್ವಾಳ, ಚಂದ್ರಶೇಖರ್ ಗೌಡ, ಭಟ್ಕಳ, ಹೊನ್ನಾವರ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ್ ನಾಯ್ಕ್, ಬೆಳ್ತಂಗಡಿ ನೋಟರಿ ವಕೀಲ ಭಗೀರಥ ಜಿ. ಉಡುಪಿ ಆತ್ಮನಂದ ಸರಸ್ವತಿ ಐ ಟಿ ಐ ಕಾಲೇಜು ಅಧ್ಯಕ್ಷ ಓಬು ಪೂಜಾರಿ, ಟ್ರಷ್ಟಿ ತುಕಾರಾಮ್ ಸಾಲಿಯಾನ್, ಶ್ರೀ ರಾಮ ಕ್ಷೇತ್ರ ಗ್ರಾಮ ಸಮಿತಿಗಳ ಪದಾಧಿಕಾರಿಗಳು,ಸದಸ್ಯರು, ಸ್ವಾಮೀಜಿಯವರ ಶಿಷ್ಯರು, ಭಕ್ತರು ಹಾಜರಿದ್ದರು.

ಉಪನ್ಯಾಸಕ ಕೇಶವ ಬಂಗೇರ ನಿರೂಪಿಸಿದರು. ಕಾರ್ಯಕ್ರಮದ ಮೊದಲು ಶ್ರೀಗಳ ಭವ್ಯ ಮೆರವಣಿಗೆ ಯೊಂದಿಗೆ ಪುರ ಪ್ರವೇಶ, ಪಾದ ಪೂಜೆ ನಡೆಯಿತು.

- Advertisement -

Latest News

error: Content is protected !!