ಮೈಸೂರು: ಸೂಪರ್ ಹಿಟ್ ಚಾರ್ಲಿ ಸಿನಿಮಾದಲ್ಲಿ ಅಭಿನಯಿಸಿದ ಚಾರ್ಲಿ ಶ್ವಾನ ಮುದ್ದಾದ ಮರಿಗಳಿಗೆ 6 ಜನ್ಮನ ನೀಡಿದೆ. ಒಂದು ಗಂಡು ಹಾಗೂ 5 ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ.

‘777 ಚಾರ್ಲಿ’ ಚಿತ್ರಕ್ಕಾಗಿ ತರಬೇತಿ ನೀಡಿದ್ದ ಪ್ರಮೋದ್ ಅವರ ಮೈಸೂರಿನ ಮನೆಯಲ್ಲಿಯೇ ಚಾರ್ಲಿ ವಾಸವಾಗಿದ್ದು, ಅಲ್ಲಿಯೇ ಮರಿಗಳಿಗೆ ಜನ್ಮ ನೀಡಿದೆ. ಇನ್ನು ಚಾರ್ಲಿ ಮರಿ ಹಾಕಿರುವ ವಿಷಯ ತಿಳಿದು ಮೈಸೂರಿಗೆ ತೆರಳಿದ್ದ ರಕ್ಷಿತ್ ಶೆಟ್ಟಿ , ಇನ್‌ಸ್ಟಾಗ್ರಾಂ ಲೈವ್ ಬರುವ ಮೂಲಕ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಚಾರ್ಲಿಯ ಮರಿಗಳನ್ನು ತೋರಿಸಿದ್ದಾರೆ.

ಲೈವ್ ನಲ್ಲಿ ಮಾತನಿಡರುವ ರಕ್ಷಿತ್ ‘ಚಾರ್ಲಿ ತಾಯಿಯಾಗುತ್ತಾಳೋ ಇಲ್ಲವೊ ಎಂಬ ಅನುಮಾನವಿತ್ತು. ಅದು ಈಗ ದೂರವಾಗಿದೆ’ ಎಂದಿದ್ದಾರೆ.ಚಾರ್ಲಿ ಮರಿ ಹಾಕಿರುವ ವಿಷಯ ತಿಳಿದು ಮೈಸೂರಿನಲ್ಲಿರುವ ಪ್ರಮೋದ್ ಅವರ ಮನೆಗೆ ಬಂದೆ. ಚಾರ್ಲಿ ಸಿನಿಮಾ ಮುಗಿದು ಎರಡು ವರ್ಷ ಕಳೆಯಿತು. ಚಾರ್ಲಿ ತಾಯಿ ಆಗುವುದನ್ನು ನೋಡುವುದಕ್ಕೆ ಇಡೀ ಚಿತ್ರತಂಡವೇ ಕಾಯುತಿತ್ತು. ಪ್ರಮೋದ್ ಅವರಿಗೆ ಕರೆ ಮಾಡಿ ಚಾರ್ಲಿ ತಾಯಿ ಆಗುತ್ತಾಳಾ ಎಂದು ಕೇಳುತ್ತಿದ್ದೆ. ವಯಸ್ಸಾದ್ದರಿಂದ ತಾಯಿಯಾಗುವ ಸಂಭವ ಕಡಿಮೆ ಎಂದು ಅವರು ಹೇಳುತ್ತಿದ್ದರು. ಕೊನೆಗೂ ತಾಯ್ತನದ ಸಂಭ್ರಮವನ್ನು ಚಾರ್ಲಿ ಅನುಭವಿಸುತ್ತಿದ್ದಾಳೆ. ಮೇ 9ರಂದು 6 ಮರಿಗಳಿಗೆ ಜನ್ಮ ನೀಡಿದ್ದಾಳೆ’ ಎಂದು ಹೇಳಿದ್ದಾರೆ.