Thursday, June 4, 2026
Homeಕರಾವಳಿಸುಬ್ರಮಣ್ಯ; ಹಿರಿಯ ರಾಜಕೀಯ ಧುರೀಣ ಚಂದ್ರಶೇಖರ್ ಮೇಲ್ನಾಡ್ ನಿಧನ

ಸುಬ್ರಮಣ್ಯ; ಹಿರಿಯ ರಾಜಕೀಯ ಧುರೀಣ ಚಂದ್ರಶೇಖರ್ ಮೇಲ್ನಾಡ್ ನಿಧನ

- Advertisement -
- Advertisement -

ಸುಬ್ರಮಣ್ಯ; ಸುಳ್ಯ ತಾಲೂಕಿನ ಹಿರಿಯ ರಾಜಕೀಯ ಧುರೀಣ, ಶಾಸಕ, ಸಚಿವ ಅಂಗಾರ ಅವರ ರಾಜಕೀಯ ಗುರು ಚಂದ್ರಶೇಖರ್ ಮೇಲ್ನಾಡ್ ನಿಧನರಾಗಿದ್ದಾರೆ.ಇಂದು ಅವರು ತಮ್ಮ ಸ್ವಗೃಹ ಮೇಲ್ನಾಡ್ ನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಚಂದ್ರಶೇಖರ್ ಅವರು ಇಂದು ಬೆಳಿಗ್ಗೆ ಎಂದಿನಂತೆ ತಿಂಡಿ ತಿಂದು, ಸ್ವಲ್ಪ ಹೊತ್ತಲ್ಲಿ ತೀವ್ರ ಹೃದಯಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಪುತ್ರ ಗುರುಪ್ರಸಾದ್ ಮೇಲ್ನಾಡ್ ಕಡಬ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

 ಚಂದ್ರಶೇಖರ್ ಮೇಲ್ನಾಡ್ ಅವರು ಏನೆಕಲ್ಲು ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ, ಗುತ್ತಿಗಾರು ತಾಲೂಕು ಪಂಚಾಯಿತ್ ನ ಸದಸ್ಯರಾಗಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ರಾಜಕೀಯದಿಂದ ದೂರು ಉಳಿದಿದ್ದರು.  

ಮೃತರು ಪತ್ನಿ ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು , ಬಂಧು ಮಿತ್ರರನ್ನು ಅಗಲಿದ್ದಾರೆ.

.

- Advertisement -

Latest News

error: Content is protected !!