Thursday, June 4, 2026
Homeಕರಾವಳಿಸುಳ್ಯ:ದಿಢೀರ್ ಅನಾರೋಗ್ಯದಿಂದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸಾವು

ಸುಳ್ಯ:ದಿಢೀರ್ ಅನಾರೋಗ್ಯದಿಂದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸಾವು

- Advertisement -
- Advertisement -

ಸುಳ್ಯ:ದಿಢೀರ್ ಅನಾರೋಗ್ಯದಿಂದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ  ಐವತ್ತೊಕ್ಲು ಗ್ರಾಮದಲ್ಲಿ ನಡೆದಿದೆ.,ಚಂದ್ರಶೇಖರ್ ಮೇಲ್ಪಾಡಿ ಮೃತ ದುರ್ದೈವಿ.

ಚಂದ್ರಶೇಖರ್ ಮೇಲ್ಪಾಡಿ  ಅವರಿಗೆ ಮಾ.31 ರಂದು ಮುಂಜಾನೆ ಹೊಟ್ಟೆನೋವು ಕಾಣಿಸಿಕೊಂಡಿತ್ತು.  ಕೂಡಲೇ ಅವರನ್ನು ಕಡಬ ತಾಲೂಕಿನ  ಕಾಣಿಯೂರಿನ ಆಸ್ಪತ್ರೆಗೆ ಕರೆತಂದು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.  ಆದರೆ ಅಲ್ಲಿ ತಲುಪುವ ವೇಳೆ ಅವರು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ .

ಐವತ್ತೊಕ್ಲು ಗ್ರಾಮದ ಒಂದನೇ ವಾರ್ಡ್ ಬೂತ್ ಅಧ್ಯಕ್ಷನಾಗಿ, ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದರು.   ಮೃತರು ತಾಯಿ , ಪತ್ನಿ ಸಹೋದರ ,ಸಹೋದರಿಯನ್ನು ಅಗಲಿದ್ದಾರೆ.ಇನ್ನು ಮೃತ ಚಂದ್ರಶೇಖರ್ ನಿವಾಸಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

- Advertisement -

Latest News

error: Content is protected !!