Thursday, June 4, 2026
Homeಕರಾವಳಿಕೊಣಾಜೆಯಲ್ಲಿ ಮಹಿಳೆಗೆ ಖಾರದ ಪುಡಿ ಎರಚಿ, ಕರಿಮಣಿ ಎಗರಿಸಿದ ಕಳ್ಳರು

ಕೊಣಾಜೆಯಲ್ಲಿ ಮಹಿಳೆಗೆ ಖಾರದ ಪುಡಿ ಎರಚಿ, ಕರಿಮಣಿ ಎಗರಿಸಿದ ಕಳ್ಳರು

- Advertisement -
- Advertisement -

ಕೊಣಾಜೆ : ಮಹಿಳೆಗೆ ಖಾರದ ಪುಡಿ ಎರಚಿ ಕರಿಮಣಿಸರವನ್ನು ಎಗರಿಸಿ ಕಳ್ಳರು ಬೈಕ್ ನಲ್ಲಿ ಪರಾರಿಯಾದ ಘಟನೆ ಹರೇಕಳದ ಬಾವಲಿಗುರಿ ಎಂಬಲ್ಲಿ ಇಂದು ನಡೆದಿದೆ. ಅದೃಷ್ಟವಶಾತ್ ಮಹಿಳೆ ಅಪಾಯದಿಂದ ಪಾರಾಗಿದ್ದು, ಅಲ್ಲದೇ  ದುಷ್ಕರ್ಮಿಗಳು ಎಗರಿಸಿದ ಕರಿಮಣಿ ಸರ ರೋಲ್ಡ್ ಗೋಲ್ಡ್ ಆಗಿತ್ತು ಎಂದು ತಿಳಿದು ಬಂದಿದೆ.

ಹರೇಕಳ ಗ್ರಾಮದ ಬಾವಲಿಗುರಿ ಎಂಬಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಶಾಂತ ಎಂಬ ಮಹಿಳೆಗೆ ಬೈಕಿನಲ್ಲಿ ಬಂದ ಇಬ್ಬರು ಖಾರದ ಪುಡಿ ಎರಚಿದ್ದಾರೆ. ಬಳಿಕ ಅವರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ.

ಶಾಂತ ಅವರು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!