Wednesday, June 24, 2026
Homeಕರಾವಳಿಮಂಗಳೂರುಮಂಗಳೂರು;ಮಗುವಿನ ಕುತ್ತಿಗೆಯಿಂದ ಸರ ಕಳ್ಳತನ ಮಾಡಿದ ಪ್ರಕರಣ: ಖತರ್ನಾಕ್ ಕಳ್ಳಿ ಮಿನ್ನತ್ ಬಂಧನ

ಮಂಗಳೂರು;ಮಗುವಿನ ಕುತ್ತಿಗೆಯಿಂದ ಸರ ಕಳ್ಳತನ ಮಾಡಿದ ಪ್ರಕರಣ: ಖತರ್ನಾಕ್ ಕಳ್ಳಿ ಮಿನ್ನತ್ ಬಂಧನ

- Advertisement -
- Advertisement -

ಮಂಗಳೂರು: ಮಗುವಿನ ಕುತ್ತಿಗೆಯಿಂದ ಸರ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖತರ್ನಾಕ್ ಕಳ್ಳಿ ಮಿನ್ನತ್ ಳನ್ನು ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ತಾಲೂಕು ಬೆಳ್ಮ ಗ್ರಾಮ ವಾಸಿ ಶ್ರೀಮತಿ ರಹಮತ್ ಎಂಬವರು ತನ್ನ ಮಕ್ಕಳೊಂದಿಗೆ ದಿನಾಂಕ: 02-06-2025 ರಂದು ತೊಕ್ಕೊಟ್ಟು ಗ್ರಾಮದಲ್ಲಿರುವ ಸಾಗರ ಕಲೆಕ್ಷನ್ ಅಂಗಡಿಗೆ ತನ್ನ ಮಕ್ಕಳೊಂದಿಗೆ ಬಟ್ಟೆ ಖರೀದಿಸಲು ಹೋಗುತ್ತಿದ್ದಾಗ ಮಳೆ ಬಂದ ಕಾರಣ ಸ್ಟ್ರೀಟ್ ಪ್ಯಾಲೇಸ್ ಬೇಕರಿಯ ಮುಂದೆ ನಿಂತುಕೊಂಡಿದ್ದಾಗ ತನ್ನ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಯಾರೋ ಬುರ್ಖಾ ಧರಿಸಿದ್ದ ಹೆಂಗಸು ಕಿತ್ತುಕೊಂಡು ಹೋಗಿದ್ದಾಳೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿ ಉಳ್ಳಾಲದ ನಿವಾಸಿ ಶ್ರೀಮತಿ ಮಿನ್ನತ್ ಎಂಬಾಕೆಯನ್ನು ದಿನಾಂಕ: 12-09-2025 ರಂದು ವಶಕ್ಕೆ ಪಡೆದು ಸುಲಿಗೆ ಮಾಡಿದ 10 ಗ್ರಾಂ ಚಿನ್ನದ ಸರವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿತೆಯ ವಿಚಾರಣೆ ಸಮಯದಲ್ಲಿ ದಿನಾಂಕ 09-07-2025 ರಂದು ಪಜೀರ್ ಎಂಬಲ್ಲಿರುವ ಕೆ.ಎಮ್.ಎಸ್ ಕನ್ವೇನ್  ಹಾಲ್ ಗೆ ಮದುವೆ ಕಾರ್ಯಕ್ರಮದಲ್ಲಿ ಬ್ಯಾಗಿನಿಂದ 8 ಗ್ರಾಂ ತೂಕದ ಚಿನ್ನದ ಸರವನ್ನು ಕೂಡಾ ಕಳವು ಮಾಡಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2025 ಕಲಂ 303(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಆ ಚಿನ್ನದ ಸರವನ್ನು ಸಹ ಈ ದಿನ ಅಮಾನತ್ತು ಪಡಿಸಲಾಗಿರುತ್ತದೆ.  ಮಹಿಳಾ ಆರೋಪಿಯನ್ನು ಈ ದಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿರುತ್ತಾರೆ.

ಆರೋಪಿತೆ ಶ್ರೀಮತಿ ಮಿನ್ನತ್ ಎಂಬಾಕೆಯಿಂದ ಸುಲಿಗೆಯಾಗಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರ  ಸುಮಾರು 8  ಗ್ರಾಂ ತೂಕದ ಚಿನ್ನದ ಸರವನ್ನು (ಒಟ್ಟು ಮೌಲ್ಯ ರೂ 1,80,000/-) ಅಮಾನತು ಪಡಿಸಿಕೊಂಡು ಆರೋಪಿತೆಯ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ತನಿಖೆಗ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

- Advertisement -

Latest News

error: Content is protected !!