- Advertisement -
- Advertisement -
ಮಂಗಳೂರು; ವಿಳಾಸ ಕೇಳುವ ನೆಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಕದ್ದ ಆರೋಪಿಯನ್ನು ಅರೆಸ್ಟ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹಳೆಯಂಗಡಿಯ ಇಂದಿರಾ ನಗರದ ನಿವಾಸಿ ಅಬ್ದುಲ್ ರವೂಫ್ (30) ಬಂಧಿತ ಆರೋಪಿ. ಆತನಿಂದ ಸುಮಾರು ₹ 70 ಸಾವಿರ ಮೌಲ್ಯದ ಚಿನ್ನದ ಸರ, ₹ 50 ಸಾವಿರ ಮೌಲ್ಯದ ಸ್ಕೂಟರ್, ಸುಮಾರು ₹ 50 ಸಾವಿರ ಮೌಲ್ಯದ ಆಟೊ ರಿಕ್ಷಾ ಹಾಗೂ ಇತರ ಸ್ವತ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ 10 ಸುಲಿಗೆ ಮತ್ತು ಕಳವಿಗೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಆರೋಪಿ 2 ತಿಂಗಳ ಹಿಂದೆ ಜಾಮೀನು ಪಡೆದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
- Advertisement -