Friday, June 5, 2026
Homeಕರಾವಳಿಮಂಗಳೂರುಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ಚಡ್ಡಿ ಗ್ಯಾಂಗ್: ಪುತ್ತೂರಿನ ಕೆಯ್ಯೂರಿನಲ್ಲಿ ಗ್ಯಾಂಗ್ ಪ್ರತ್ಯಕ್ಷ

ಕರಾವಳಿಯಲ್ಲಿ ಮತ್ತೆ ಸದ್ದು ಮಾಡುತ್ತಿದೆ ಚಡ್ಡಿ ಗ್ಯಾಂಗ್: ಪುತ್ತೂರಿನ ಕೆಯ್ಯೂರಿನಲ್ಲಿ ಗ್ಯಾಂಗ್ ಪ್ರತ್ಯಕ್ಷ

- Advertisement -
- Advertisement -

ಪುತ್ತೂರು; ಕಳೆದ ಕೆಲವು ತಿಂಗಳುಗಳ ಹಿಂದೆ ಕರಾವಳಿಯಲ್ಲಿ ಭಾರೀ ಸದ್ದು ಮಾಡಿದ್ದ ಚಡ್ಡಿ ಗ್ಯಾಂಗ್ ಇದೀಗ ಮತ್ತೆ ಆತಂಕ ಸೃಷ್ಟಿ ಮಾಡಿದೆ. ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದೆ.

ನ.5 ರಂದು ರಾತ್ರಿ ಸುಮಾರು 9 ಗಂಟೆ ವೇಳೆಗೆ ಕೆಯ್ಯೂರಿನ ಸಣಂಗಳ ಎಂಬಲ್ಲಿ ಮನೆಯಂಗಳದಲ್ಲಿ ಚಡ್ಡಿ ಬನಿಯನ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿದ್ದ ಸುಮಾರು ನಾಲ್ಕು ಮಂದಿಯ ತಂಡವೊಂದು ಪ್ರತ್ಯಕ್ಷವಾಗಿದೆ. ರಬ್ಬರ್ ಟ್ಯಾಪಿಂಗ್ ವೃತ್ತಿಯಲ್ಲಿರುವ ಮಾರ್ಗರೇಟ್ ಎಂಬವರ ಬಾಡಿಗೆ ಮನೆಯ ಅಂಗಳಕ್ಕೆ ಬಂದ ಈ ಗ್ಯಾಂಗ್ ಬೆದರಿಕೆ ಹಾಕಿದೆ. ಹಣ, ಒಡವೆ ನೀಡುವಂತೆ ಹೆದರಿಸಿದ್ದಾರೆ. ಇದೇ ವೇಳೆ ಮನೆಯಲ್ಲಿ ಬೇರೆಯವರು ಇರೋದನ್ನು ನೋಡಿ ಗ್ಯಾಂಗ್ ಎಸ್ಕೇಪ್ ಆಗಿದೆ. ಇನ್ನು ಮಾರ್ಗರೇಟ್ ಅವರು ಈ ವೇಳೆ ಕಳ್ಳರು ಫೋಟೋವನ್ನು ಸೆರೆ ಹಿಡಿದಿದ್ದಾರೆ. ಆ ಫೋಟೋ ವೈರಲ್ ಆಗಿದೆ.

- Advertisement -

Latest News

error: Content is protected !!