Friday, May 17, 2024
Homeತಾಜಾ ಸುದ್ದಿಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ: ಈ ಬಾರಿ ವಿದ್ಯಾರ್ಥಿನಿಯರದ್ದೇ ಮೇಲುಗೈ

ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ: ಈ ಬಾರಿ ವಿದ್ಯಾರ್ಥಿನಿಯರದ್ದೇ ಮೇಲುಗೈ

spot_img
- Advertisement -
- Advertisement -

ಬೆಂಗಳೂರು: 2021-22ನೇ ಸಾಲಿನ ಸಿಇಟಿ  ಪರೀಕ್ಷಾ ಫಲಿತಾಂಶವನ್ನು ಸಚಿವ ಅಶ್ವತ್ಥ್​ ನಾರಾಯಣ ಪ್ರಕಟಿಸಿದರು. ಈ ಬಾರಿಯ ಸಿಇಟಿಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಒಟ್ಟು 83 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಈ ಭಾರಿ ಸಿಇಟಿ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್​ಗೆ 1,71,656 ರ್ಯಾಂಕ್​​​, ಕೃಷಿ ಕೋರ್ಸ್​ಗೆ 1,39,968 ರ್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್ ಬಂದಿದೆ. Kea.kar.nic.in ಮತ್ತು karesults.nic.in ಫಲಿತಾಂಶ ಪ್ರಕಟ ಮಾಡಲಾಗಿದೆ.

ಇಂಜಿನಿಯರಿಂಗ್ ಕೋರ್ಸ್

ಯಲಹಂಕ ನ್ಯಾಷನಲ್ ಪಬ್ಲಿಕ್ ಸ್ಕೂಲ್​ ವಿದ್ಯಾರ್ಥಿ  ಅಪೂರ್ವ ತಂಡೋನ್ 97% ಪ್ರಥಮ ರ್ಯಾಂಕ್ ಪಡೆದಿದ್ದು, ಮಾರತ್ತಹಳ್ಳಿ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್  ವಿದ್ಯಾರ್ಥಿ  ಸಿದ್ದಾರ್ಥ ಸಿಂಗ್ 96% ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಅತ್ಮಕುರಿ ವೆಂಕಟ ತೃತಿಯ ರ್ಯಾಂಕ್ ಪಡೆದುಕೊಂಡಿದ್ದಾರೆ.

ನ್ಯಾಚುರೋಪರಿ ಮತ್ತು ಯೋಗ

ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್ ಹೃಷಿಕೇಶ್ 98% ಪ್ರಥಮ ರ್ಯಾಂಕ್ ಪಡೆದರೆ, ಉಡುಪಿಯ ಮಾದವ ಕೃಪ ಇಂಗ್ಲೀಷ್ ಸ್ಕೂಲ್ ವಿದ್ಯಾರ್ಥಿ ವ್ರಜೇಶ್, 96% ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಶ್ರೀ ಚೈತನ್ಯ ಟೆಕ್ನೊ ಸ್ಕೂಲ್​ನ ಕೃಷ್ಣ, 96% ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.

B.sc ಅಗ್ರಿಕಲ್ಚರ್

HAL ಪಬ್ಲಿಕ್ ಸ್ಕೂಲ್​ನ ಅರ್ಜುನ್, 93%, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಉಲ್ಲಾಳ ಸುಮೀತ್, 92%, ತುಮಕೂರು ವಿದ್ಯಾನಿಕೇತನ ಪಿಯು ಕಾಲೇಜ್ ಸುದೀಪ್ 92%. ಸಿಇಟಿ ಪರೀಕ್ಷೆಯಲ್ಲಿ ಒಟ್ಟು 7 ಅಂಕ ಕೃಪಾಂಕ ನೀಡಲಾಗಿದೆ.

B.v.sc (ವೆಟರ್ನರಿ ಸೈನ್ಸ್)

ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು ಹೃಷಿಕೇಶ್, 98%, ಪ್ರಥಮ ರ್ಯಾಂಕ್ ಪಡೆದಿದ್ದು, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಕೆ.ಆರ್.ಪುರ ಮನೀಶ್, 97%, ದ್ವಿತೀಯ ರ್ಯಾಂಕ್​ ಶುಭಾ ಕೌಶಿಕ್, 96%, ತೃತೀಯ ರ್ಯಾಂಕ್ ಪಡೆದಿದ್ದಾರೆ. ಸೆಪ್ಟೆಂಬರ್ 1 ರಿಂದ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದೆ.

KCET ಫಲಿತಾಂಶ 2022 ಅನ್ನು ಹೇಗೆ ಪರಿಶೀಲಿಸುವುದು?: – ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಭೇಟಿ ನೀಡಿ

– ವೆಬ್​ಸೈಟ್​​ನಲ್ಲಿ ಮುಖಪುಟದಲ್ಲಿ ‘KCET ಫಲಿತಾಂಶ 2022’ ಮೇಲೆ ಕ್ಲಿಕ್ ಮಾಡಿ

– ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ

– ಆಗ ನಿಮ್ಮ KCET ಫಲಿತಾಂಶಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ

– ರಿಸಲ್ಟ್​ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್‌ಔಟ್ ತೆಗೆದುಕೊಳ್ಳಿ

- Advertisement -
spot_img

Latest News

error: Content is protected !!